ಜಿಲ್ಲೆ

ಡಾ. ಗಿರಡ್ಡಿ ಗೋವಿಂದರಾಜ್ ವಿಮರ್ಶಾ ಪ್ರಶಸ್ತಿ ಪ್ರಕಟ

ಧಾರವಾಡ: ನಗರದ ಗಿರಡ್ಡಿ ಗೋವಿಂದರಾಜ್ ಪ್ರತಿಷ್ಠಾನ ವತಿಯಿಂದ ಡಾ. ಗಿರಡ್ಡಿ ಗೋವಿಂದರಾಜ್ ಹೆಸರಿನಲ್ಲಿ ನೀಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಡಾ. ಗಿರಡ್ಡಿ ಗೋವಿಂದರಾಜ್ ವಿಮರ್ಶಾ ಪ್ರಶಸ್ತಿಗೆ ಡಾ. ಮೇಟಿ ಮಲ್ಲಿಕಾರ್ಜುನ ಅವರ ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ’ ವಿಮರ್ಶಾ ಕೃತಿ ಆಯ್ಕೆಯಾಗಿದೆ. ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಪ್ರಶಸ್ತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಡಾ. ಓ.ಎಲ್.ನಾಗಭೂಷಣಸ್ವಾಮಿ, ಡಾ. ವಿಕ್ರಮ ವಿಸಾಜಿ ಮತ್ತು ಡಾ. ಗೀತಾ ವಸಂತ ಅವರಿದ್ದ ಆಯ್ಕೆ ಸಮಿತಿ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಸೆ. 22ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.