ಮೈಸೂರು: ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಡಾ.ಕೆ.ವಿ.ರಾಜೇಂದ್ರ ಅವರನ್ನು ನಿಯೋಜಿಸಲಾಗಿದೆ.
ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದ್ದು, ಇದರಲ್ಲಿ ಡಾ.ಬಗಾದಿ ಗೌತಮ್ ಅವರ ಹೆಸರು ಕೂಡ ಸೇರಿದೆ.
ಐಎಎಸ್ 2009ನೇ ಬ್ಯಾಚ್‌ನ ಡಾ.ಬಗಾದಿ ಅವರನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶನ ಸ್ಥಾನಕ್ಕೆ ವರ್ಗಾಹಿಸಲಾಗಿದೆ. ಇವರಿಂದ ತೆರವಾಗಿರುವ ಸ್ಥಾನಕ್ಕೆ 2013ನೇ ಬ್ಯಾಚ್‌ನ ಡಾ.ಕೆ.ವಿ.ರಾಜೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆ ಡಿಸಿ ಆಗಿದ್ದರು.