ಮೈಸೂರು: ನಗರ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ.ಕೆ.ಅನುಷಾ ರಾಜ್ ಅವರು ‘ಮಿಸ್ ಮೆಡಿಕ್ವೀನ್-2025’ ಆಗಿ ವಿಜಯಿಯಾಗಿದ್ದಾರೆ.
ಮೆಡಿಕ್ವೀನ್ ಭಾರತ ಇಂಟರ್‌ನ್ಯಾಷನಲ್ ಮಿಸ್ ಮಿಸೆಸ್ 2025 ಎಂಬುದು ವೈದ್ಯಕೀಯ ಕ್ಷೇತ್ರದ ಮಹಿಳೆಯರಿಗೆ ಮೀಸಲಾದ ಸೌಂದರ್ಯ ಸ್ಪರ್ಧೆ ಇದು.
’ಮಹಿಳಾ ಆರೋಗ್ಯದ ಸಂಭ್ರಮ’ ಎಂಬ ಧ್ಯೇಯದೊಂದಿಗೆ ವೈದ್ಯಕೀಯ ಸಮುದಾಯದ ಸಾಧನೆ ಗೌರವಿಸುವ ಆಶಯ ಹೊಂದಿದೆ. ಸೀಸನ್ 6 ಕಾರ್ಯಕ್ರಮವು ಪುಣೆಯಯಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆದಿತ್ತು.
ಪ್ರೀ-ಫೈನಲ್‌ನಲ್ಲಿ ಡಾ.ಅನುಷಾ ಅವರಿಗೆ ವಿಶಿಷ್ಟವಾದ ’ಫೇಸ್ ಆಫ್ ಮೆಡಿಕ್ವೀನ್’ ಎಂಬ ಗೌರವ ನೀಡಲಾಯಿತು. ಅಲ್ಲದೆ, ಅವರು ’ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೆಲ್ತ್‌ಕೇರ್ ಅವಾರ್ಡ್ಸ್ 2025 -ಬೆಸ್ಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್’ ಪ್ರಶಸ್ತಿಗೆ ಭಾಜನರಾದರು.
ಮೈಸೂರು ಚೈಲ್ಡ್ ನ್ಯೂರೋಲಾಜಿ ಆ್ಯಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸಂಸ್ಥಾಪಕರು, ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ.ಅನುಷಾ ರಾಜ್ ಅವರು ಡಾ.ಕೆ.ಎಚ್.ಬಸವರಾಜ್ (ಚರ್ಮ ತಜ್ಞ) ಹಾಗೂ ಡಾ. ಎಂ.ಬಿ.ಭಾರತಿ (ಜೆಎಸ್‌ಎಸ್ ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು) ದಂಪತಿಯ ಪುತ್ರಿ.