ಜಿಲ್ಲೆ

ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನ ರಸಾಯನ

ಮೈಸೂರು: ಗಾನಚಂದನ ಕಲಾ ಬಳಗದ ವತಿಯಿಂದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡುಗಳ ‘ಗಾನ ರಸಾಯನ ಕಾರ್ಯಕ್ರಮ’ವನ್ನು ಆ. 19ರ ಸಂಜೆ 5ಕ್ಕೆ ಲಕ್ಷ್ಮೀಪುರಂನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಲಾಗಿದೆ.


ಸುಮಾರು 35 ಹಾಡುಗಳನ್ನು 9 ಗಾಯಕರು ಹಾಡಲಿದ್ದಾರೆ. ಕನ್ನಡ ಪ್ರಮುಖವಾಗಿರುವಂತೆ ತೆಲುಗು, ಹಿಂದಿ, ತಮಿಳು ಗೀತೆಗಳೂ ಇರಲಿವೆ. ಮೇಯರ್ ಶಿವಕುಮಾರ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಬಳಗದ ಆರ್.ಸುಧೀಂದ್ರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಆಯೋಜಕರಾದ ಆರ್. ನಟರಾಜ್, ಪುಟ್ಟಣ್ಣ, ಸುರೇಶ್ ಹಾಗೂ ಮಧುಸೂದನ್ ಇದ್ದರು.