ಕಲ್ಲೋಳಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಉದ್ಘಾಟಿಸಿದರು. ಡಾ.ವಿ.ಎಸ್.ಮಾಳಿ, ಡಾ.ಎಸ್.ಎಂ.ಗಂಗಾಧರಯ್ಯ ಇತರರು ಇದ್ದರು. 
ಜಿಲ್ಲೆ

ಡಾ.ಎಂ.ಎಂ.ಕಲಬುರ್ಗಿ ಸಂಶೋಧನೆ ಸ್ಮರಣೀಯ

ಮೂಡಲಗಿ: ಡಾ. ಎಂ.ಎಂ.ಕಲಬುರ್ಗಿ ಅವರು ಕಿತ್ತೂರು ಸಂಸ್ಥಾನದ ಕುರಿತು ಅತ್ಯಂತ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಡಿದ ಸಂಶೋಧನೆ ಸ್ಮರಣೀಯವಾಗಿದೆ. ಕಲಬುರ್ಗಿ ಅವರ ಸಂಶೋಧನೆಗಳು ಯಾವಾಗಲೂ ಸತ್ಯದ ಹೊಸ ದಷ್ಟಿಕೋನದಲ್ಲಿ ಇರುತ್ತವೆ ಎಂದು ಹಾರೂಗೇರಿಯ ಹಿರಿಯ ಸಾಹಿತಿ, ಸಂಶೋಧಕ ಡಾ.ವಿ.ಎಸ್.ಮಾಳಿ ಹೇಳಿದರು.

ತಾಲೂಕಿನ ಕಲ್ಲೋಳಿಯಲ್ಲಿ ಬೆಳಗಾವಿಯ ಆರ್‌ಸಿಯು ಅಧ್ಯಯನ ಪೀಠ ಹಾಗೂ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಸರಣಿ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಉಪನ್ಯಾಸ, ಡಾ. ಎಂ.ಎಂ.ಕಲಬುರ್ಗಿ ಅವರ ಕಿತ್ತೂರು ಕುರಿತ ಶೋಧಗಳು ಎಂಬ ವಿಷಯದ ಕುರಿತು ಮಾತನಾಡಿದರು. ಕನ್ನಡ ವಿದ್ವಾಂಸರಲ್ಲಿ ಡಾ. ಎಂ.ಎಂ. ಕಲಬುರ್ಗಿಯವರೂ ಒಬ್ಬರು. ಕಲಬುರ್ಗಿ ಮಾತ್ರ ಎಲ್ಲ ಕ್ಷೇತ್ರಾಧ್ಯಯನಗಳಲ್ಲಿ ಸ್ವತಂತ್ರ ಪ್ರತಿಭೆ ಮೆರೆದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್‌ಸಿಯು ಅಧ್ಯಯನ ಪೀಠದ ನಿರ್ದೇಶಕ ಡಾ.ಎಸ್.ಎಂ.ಗಂಗಾಧರಯ್ಯ ಮಾತನಾಡಿ, ಕಿತ್ತೂರು ಸಂಸ್ಥಾನ ಮತ್ತು ರಾಣಿ ಚನ್ನಮ್ಮಳ ಕುರಿತ ವಿಷಯ ಆಳವಾದ ಅಧ್ಯಯನಕ್ಕೆ ಒಳಪಡಿಸಿ ಮಾಹಿತಿ ಸಂಗ್ರಹ ಮತ್ತು ಪ್ರಕಟಣೆಯ ಕಾರ್ಯವನ್ನು ಪೀಠದ ವತಿಯಿಂದ ಮಾಡುತ್ತಿದ್ದೇವೆ ಎಂದರು.

ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ಸಂಸ್ಥೆಯ ನಿರ್ದೇಶಕರಾದ ಸಾತಪ್ಪ ಖಾನಾಪುರ, ಮಹಾಂತೇಶ ಕಪ್ಪಲಗುದ್ದಿ, ಅಧ್ಯಾಪಕರಾದ ಡಾ.ಆನಂದಕುಮಾರ ಜಕ್ಕನ್ನವರ, ಸುಭಾಷ ವಾಲಿಕಾರ, ಡಾ.ಕೆ. ಎಸ್.ಪರವ್ವಗೋಳ, ಶಂಕರ ನಿಂಗನೂರ, ಎಂ.ಬಿ.ಕುಲಮೂರ, ವಿ.ವೈ.ಕಾಳೆ, ಪರ್ವೀಣ್ ಅತ್ತಾರ, ಬಿ.ಸಿ.ಮಾಳಿ, ಎಂ.ಬಿ.ಜಾಲಗಾರ, ಆರ್.ಎಸ್.ಪಂಡಿತ, ಬಿ.ಬಿ.ವಾಲಿ, ಎಸ್.ಎಂ.ಬಂಡಿ, ವಿಲಾಸ ಕೆಳಗಡೆ, ಎಂ.ಎನ್.ಮುರಗೋಡ, ಎಂ.ಆರ್.ಕರಗಣಿ, ರಾಜಶ್ರೀ ತೋಟಗಿ, ಪ್ರೊ.ಡಿ.ಎಸ್.ಹುಗ್ಗಿ, ಆರ್‌ಸಿಯು ಅಧ್ಯಯನ ಪೀಠದ ಸಂಯೋಜಕ ಡಾ. ಮಹೇಶ ಗಾಜಪ್ಪನವರ ಇತರರು ಇದ್ದರು.