ಜಿಲ್ಲೆ

ಡಾ. ಆನಂದ ಸಂಕೇಶ್ವರ ಮತ ಚಲಾವಣೆ


ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿ ಕೇಶ್ವಾಪುರ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮತಗಟ್ಟೆ ಸಂಖ್ಯೆ 130  ರಲ್ಲಿ ವಿಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಹಾಗೂ ಶ್ರೀಮತಿ ವಾಣಿ ಆನಂದ ಸಂಕೇಶ್ವರ ಅವರು ಮೊದಲಿಗರಾಗಿ ಮತ ಚಲಾಯಿಸಿದರು.

ಹುಬ್ಬಳ್ಳಿಯ ವಿವಿಧೆಡೆ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಲು ಮತದಾರರು ಉತ್ಸುಕತೆ ತೋರಿಸಿದ್ದಾರೆ. ಕೆಲವೆಡೆ ಮತದಾನ ಪ್ರಕ್ರಿಯೆ ಆರಂಭಕ್ಕೆ ಪೂರ್ವವೇ ಮತಗಟ್ಟೆ ಬಳಿ ಜನರು ಸಾಲುಗಟ್ಟಿ ನಿಂತಿದ್ದರು.