ಜಿಲ್ಲೆ

ಡಾ.ಅಂಬೇಡ್ಕರ್ ತತ್ವಾದರ್ಶ ಅಳವಡಿಸಿಕೊಳ್ಳಿ

ಕಲಬುರಗಿ: ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೋಲಾಪುರದ ಸಂಗಮೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂಘಪ್ರಕಾಶ ಮಾರುತಿ ದುಡ್ಡೆ ಕರೆ ನೀಡಿದರು.
ಸರ್ಕಾರಿ ಮಹಾವಿದ್ಯಾಲಯದಲ್ಲಿ ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ಅನೇಕ ಸಂಕಷ್ಟಗಳನ್ನು ಎದುರಿಸಿ, ಅಪಾರ ಸಾಧನೆ ಮಾಡಿದ್ದಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರನ್ನು ಎಲ್ಲರೂ ಸದಾ ಸ್ಮರಿಸಬೇಕು ಎಂದರು.
ಕೇAದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಮಾತನಾಡಿ, ಡಾ.ಅಂಬೇಡ್ಕರ್ ಶ್ರಮಿಕ ವರ್ಗದವರನ್ನು ಮೇಲೆತ್ತಿದರು, ಕೆಳಹಂತದವರನ್ನು ಕೈಹಿಡಿದು ಮುನ್ನಡೆಸಿದರು. ಹೀಗಾಗಿ ಈ ಮಹಾನ್ ವ್ಯಕ್ತಿಯನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿ ಅಧ್ಯಕ್ಷ ಡಾ.ಅರುಣಕುಮಾರ ನರೋಣಕರ್ ಪ್ರಾಸ್ತಾವಿಕ ಮಾತನಾಡಿ, ಕಳೆದ ಎಂಟು ದಿನಗಳಿಂದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದಿವೆ. ಮಹಾವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು. ಈ ಪೈಕಿ ಸುಮಾರು ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಪ್ರತಿಯೊಬ್ಬರೂ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯೆ ಡಾ.ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾ ನಿಯಂತ್ರಕ ಡಾ.ಪ್ರಶಾಂತಕುಮಾರ್.ಎA, ಉಪ ಪರೀಕ್ಷಾ ನಿಯಂತ್ರಕಿ ಪ್ರೊ.ಭುವನೇಶ್ವರಿ ಆರ್., ಕಲಾವಿಭಾಗ (ಸ್ನಾತಕ ಪದವಿ)ದ ಡೀನ್ ಅಕಾಡೆಮಿಕ್ ಡಾ.ವಿಜಯಕುಮಾರ್ ಸಾಲಿಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬೆಣ್ಣೂರು ವಿಶ್ವನಾಥ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರೊ.ರಾಜೇಶ ಅಜಬ್‌ಸಿಂಗ್, ಪ್ರಮುಖರಾದ ಪ್ರೊ.ಈರಮ್ಮಾ ಪಾಟೀಲ್, ಡಾ.ಶ್ರೀಮಂತ ಹೋಳ್ಕರ್, ಡಾ.ಆಜ್ರಾ ಯಾಸ್ಮೀನ್, ಡಾ.ಸುರೇಶ ಮುಳೇಗಾಂವ್ ಇತರರಿದ್ದರು.
ಡಾ.ರಾಜಕುಮಾರ ಸಲಗರ ಸ್ವಾಗತಿಸಿದರು. ಡಾ.ನಾಗಪ್ಪ ಗೋಗಿ ವಂದಿಸಿದರು. ಸಮಿತಿ ಸಂಚಾಲಕಿ ಇದ್ದರು.