ಜಿಲ್ಲೆ

ಡಯಾಲಿಸೀಸ್ ರೋಗಿಗಳ ನೆರವಿಗೆ ರಸಸಂಜೆ ಕಾರ್ಯಕ್ರಮ

ಚಾಮರಾಜನಗರ: ಡಯಾಲೀಸಿಸ್ ರೋಗಿಗಳ ಚಿಕಿತ್ಸೆಗೆ ನೆರವನ್ನು ನೀಡುವ ನಿಟ್ಟಿನಲ್ಲಿ ಆ.15 ರಂದು ಪಿ.ಬಿ.ಶ್ರೀನಿವಾಸ್, ಎಸ್‌ಪಿಬಿ ಹಾಗೂ ಡಾ.ರಾಜ್‌ಕುಮಾರ್ ಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗೌರ್ನರ್ ಡಾ.ನಾಗಾರ್ಜುನ್ ಹೇಳಿದರು.

ನಗರದ ಬಿ.ರಾಚಯ್ಯ ಜೋಡುರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಮೂತ್ರಕೋಶದ ತೊಂದರೆ ಅನುಭವಿಸುವವರಿಗೆ ಡಯಾಲಿಸೀಸ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮೊದಲು 3 ಯಂತ್ರಗಳಿಂದ ಪ್ರಾರಂಭಿಸಿ ಪ್ರಸ್ತುತ 10 ಯಂತ್ರಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಬಡ ರೋಗಿಗಳಿಗೆ ಕೇವಲ 499 ರೂ, ಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಅತಿ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ 1 ತಿಂಗಳಿಗೆ 2-3 ಲಕ್ಷ ರೂ ವೆಚ್ಚ ತಗಲುತ್ತದೆ. ಈ ನಿಟ್ಟಿನಲ್ಲಿ ಚಿಕಿತ್ಸೆಯನ್ನು ಮುಂದುವರಿಸಲು ದಾನಿಗಳ ನೆರವು ಅಗತ್ಯವಿದ್ದು, ಆ.15 ರಂದು ಪಿ.ಬಿ.ಶ್ರೀನಿವಾಸ್, ಎಸ್‌ಪಿಬಿ ಹಾಗೂ ಡಾ.ರಾಜ್‌ಕುಮಾರ್ ಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್, ಎಸ್‌ಪಿಬಿ ಹಾಗೂ ಡಾ.ರಾಜ್‌ಕುಮಾರ್ ಹಾಡಿರುವ ಸುಮಧುರ ಹಾಡುಗಳನ್ನು ಹಾಡಲಾಗುವುದು. ಕಾರ್ಯಕ್ರಮಕ್ಕೆ ದಾನಿಗಳು 1000 ರೂ, ನೆರವನ್ನು ನೀಡಿ ಭಾಗವಹಿಸಬಹುದಾಗಿದೆ. ಸುಮಾರು 10,000 ರೂ, ನೆರವನ್ನು ನೀಡುವ 100 ದಾನಿಗಳನ್ನು ಪಟ್ಟಿಮಾಡಲಾಗಿದ್ದು, ಹೆಚ್ಚಿನ ನೆರವಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೆರವಾಗಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ರೋಟರಿ ಸಂಸ್ಥೆ ಜಿಲ್ಲಾಧ್ಯಕ್ಷ ಕಾಗಲವಾಡಿ ಚಂದ್ರು, ಖಜಾಂಚಿ ಆರ್.ಎಂ.ಸ್ವಾಮಿ, ಡಯಾಲಿಸೀಸ್ ವಿಭಾಗದ ಪ್ರಕಾಶ್, ಸುಭಾಷ್, ರಮೇಶ್ ಹಾಗೂ ಇತರರು ಹಾಜರಿದ್ದರು.