ಮೈಸೂರು: ನಗರದ ಡಿಆರ್‌ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಹೈದರಾಬಾದ್ ಮೂಲದ ವಿಮ್ಟಾ ಸಂಸ್ಥೆಯ ನಡುವೆ ಡಯಾಗ್ನೋಸ್ಟಿಕ್ ಸಂಬಂಧಿಸಿ ಒಡಂಬಡಿಕೆಗೆ ಸಹಿ ಹಾಕಲಾಯಿತು. ರೋಗ ಪತ್ತೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳು ಮುಂದೆ ಒಟ್ಟಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗುತ್ತದೆ.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಡಂಬಡಿಕೆ ವಿನಿಯಮ ಮಾಡಿಕೊಂಡು ಡಿಆರ್‌ಎಂ ಆಸ್ಪತ್ರೆಯ ನಿರ್ದೇಶಕ ಡಾ.ಬಿ.ಎಚ್.ಮಂಜುನಾಥ್ ಮಾತನಾಡಿ, ವಿಮ್ಟಾ ಸಂಸ್ಥೆ ರೋಗಗಳ ಪತ್ತೆ ಪರೀಕ್ಷೆಯಲ್ಲಿ ಅತ್ಯಂತ ಖರಾರುವಕ್ಕಾದ ವರದಿ ನೀಡುವಲ್ಲಿ ಹೆಸರಾಗಿದೆ. ಇದರಿಂದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯನ್ನು ಮೂಲದಲ್ಲೇ ನಿಖರವಾಗಿ ಅರ್ಥ ಮಾಡಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.
ನಗರದಲ್ಲಿ ಗುಣಮಟ್ಟದ ಡಯಾಗ್ನೋಸ್ಟಿಕ್ ಸೆಂಟರ್ ಆರಂಭಿಸುತ್ತಿರುವುದರಿಂದ ನಿಖರ ಹಾಗೂ ತ್ವರಿತವಾಗಿ ರೋಗವನ್ನು ಪತ್ತೆ ಮಾಡಲು ಸಹಕಾರಿಯಾಗುತ್ತದೆ. ಇದು ಮೈಸೂರು ಜಿಲ್ಲೆ ಹಾಗೂ ಸುತ್ತಮುತ್ತಲ ಜನರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ವಿಮ್ಟಾ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸ್ ನೀರುಕೊಂಡ ಮಾತನಾಡಿ, ಹೈದರಾಬಾದ್‌ನಲ್ಲಿ ಆರಂಭವಾದ ವಿಮ್ಟಾ ಸಂಸ್ಥೆ ಕೇವಲ ಆರೋಗ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಆಹಾರ ಗುಣಮಟ್ಟದ ಪರೀಕ್ಷೆ ಕಾರ್ಯವನ್ನೂ ಮಾಡುತ್ತಿದೆ. ಯಾವುದೇ ವಸ್ತುವನ್ನು ನಾವು ವಿದೇಶಕ್ಕೆ ರ್ತು ಮಾಡಬೇಕಾದರೆ ಅದರ ಗುಣಮಟ್ಟ ಪರೀಕ್ಷೆಯಾಗಬೇಕು. ಸರ್ಕಾರ ಈ ಜವಾಬ್ದಾರಿಯನ್ನು ನಮ್ಮ ಸಂಸ್ಥೆಗೆ ನೀಡಿದೆ. ಇದಲ್ಲದೇ ಸಂಸ್ಥೆಯಲ್ಲಿ ಮಾಲಿಕ್ಯುಲಾರ್ ಬಯಾಲಜಿ, ಹೆಮಟಾಲಜಿ, ಇಮ್ಯುನಾಲಜಿ, ಬಯೊಕೆಮಿಸ್ಟ್ರಿ, ಅಲರ್ಜಿ ಟೆಸ್ಟಿಂಗ್, ಸೈಟೊಜೆನೆಟಿಕ್ಸ್, ಇಮ್ಯುನೊ ಕೆಮಿಸ್ಟ್ರಿ , ಹಿಸ್ಟೊ ಪೆಥಾಲಜಿ ಸೇವೆ ನೀಡಲಾಗುತ್ತಿದೆ. ಾರ್ಮಾ, ಕ್ಲಿನಿಕಲ್ ರಿಸರ್ಚ್ ಕ್ಷೇತ್ರದಲ್ಲಿಯೂ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಡಿಆರ್‌ಎಂ ಸಂಸ್ಥೆ ನಿರ್ದೇಶಕ ಡಿ.ಟಿ. ಪ್ರಕಾಶ್ ಮಾತನಾಡಿ, ರೋಗ ಪತ್ತೆಕಾರ್ಯ ಯಶಸ್ವಿಯಾದರೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಅದಕ್ಕಾಗಿ ವಿಮ್ಟಾ ಸಂಸ್ಥೆಯೊಂದಿಗೆ ಡಿಆರ್‌ಎಂ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.
ವಿಮ್ಟ ಸಂಸ್ಥೆಯ ಡಾ.ಸುರೇಶ್ ಕುಮಾರ್ ಇತರರು ಇದ್ದರು.