ಬಾಗಲಕೋಟೆ: ಕಳೆದ ೪ ವರ್ಷದ ಆಡಳಿತ ಅವಽಯಲ್ಲಿ ಬಿಜೆಪಿ ಲಕ್ಷಾಂತರ ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸಿದೆ. ನೂರಾರು ಕಂದಾಯ ಸಮಸ್ಯೆಗಳನ್ನು ಪರಿಹಾರಿಸಿದೆ. ಪುರಸಭೆ-ಪಂಚಾಯಿತಿಯಿಂದ ಪಾಲಿಮೆಂಟ್ ವರೆಗೂ ಐವತ್ತು ವರ್ಷಗಳ ಕಾಲ ಅಧಿಕಾರದಲ್ಲಿದ ತ್ರಿಬಲ್ ಇಂಜಿನ್ ಕಾಂಗ್ರೆಸ್ ಸರ್ಕಾರ ಮಾಡದ ಮಹತ್ತರ ಕಾರ್ಯ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಕೇವಲ ೪ ವರ್ಷದಲ್ಲಿ ಮಾಡಿದೆ. ಜನರ ಬದುಕಿನಲ್ಲಿ ಬದಲಾವಣೆ ತಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಜಿಲ್ಲಾಽಕಾರಿ ನಡೆ ಹಳ್ಳಿ ಕಡೆ ಅಡಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ, ಕುರಬರ ಹಟ್ಟಿ ಪ್ರದೇಶದ ಜನರಿಗೆ ಸ್ವಂತ ಆಸ್ತಿಯ ಹಕ್ಕು ಪತ್ರ ಇರಲಿಲ್ಲ. ಸಾವಿರಾರು ಪ್ರದೇಶದ ಜನರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ಈ ಗ್ರಾಮಗಳಿಗೆ ಹೆಸರು ನಾಮಕರಣ ಮಾಡಿದೆ. ಇದರಿಂದ ನೂರಾರು ಕುಟುಂಬಗಳು ನೆಮ್ಮದಿಯ ಬದುಕು ನಡೆಸುವಂತಾಗಿದೆ. ಕಲಬುರ್ಗಿ ಮಾದರಿಯಲ್ಲಿ ಶೀಘ್ರದಲ್ಲಿ ದಾವಣೆಗೆರೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಸಾವಿರಾರು ಜನರಿಗೆ ಹಕ್ಕು ಪತ್ರ ನೀಡಲಾಗುವುದು ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಂಬಬೇಡಿ..
ಕಾಂಗ್ರೆಸ್‌ನವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಎರಡು ಸಾವಿರ ರೂ. ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ್ ವಿದ್ಯುತ್ ಗ್ಯಾರಂಟಿ ಕಾರ್ಡ ನೀಡಲು ಮುಂದಾಗಿದೆ. ಇದನ್ನು ನಂಬಬೇಡಿ. ಅಽಕಾರದಲ್ಲಿ ಇದ್ದಾಗ ಅವರು ಏನು ಮಾಡಿಲ್ಲ. ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಮಹಿಳೆಯರ ಖಾತೆಗೆ ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸುಳ್ಳು ಭರವಸೆ ನಂಬಬೇಡಿ. ನಾವು ನಾಳೆ ಬಾ ಅಂತ ಹೇಳಲ್ಲ. ಸ್ಥಳದಲ್ಲಿ ಸಮಸ್ಯೆಗೆ ಪರಿಹಾರ, ಯೋಜನೆ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ವಿಧಾನ ಪರುಷತ್ ಸದಸ್ಯರಾದ ಎಚ್.ಆರ್.ನಿರಾಣಿ, ಪಿ.ಎಚ್.ಪೂಜಾರ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಕಲಾದಗಿ ಗ್ರಾ.ಪಂ ಅಧ್ಯಕ್ಷ ಜಮೀರಹಮದ್ ಜಮಾದಾರ, ಸಿಇಒ ಟಿಭೂಬಾಲನ್, ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ, ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರರಾದ ಅಮರೇಶ ಪಮ್ಮಾರ, ಸುಹಾಷ ಇಂಗಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಽಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕಂದಾಯ ಸಚಿವ ಆರ್.ಅಶೋಕ ಉದ್ಘಾಟಿಸಿದರು. ಸಚಿವ, ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ವಿ.ಪ ಸದಸ್ಯರಾದ ಹನುಮಂತ ನಿರಾಣಿ, ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಇದ್ದರು.
ನಾನು ಕೂಡಾ ರೈತನ ಮಗಾ
ಬಾಗಲಕೋಟೆ: ನಾನು ಕೂಡಾ ರೈತ ಕುಟುಂಬದಿಂದ ಬಂದವನು. ೬೫ ಎಕರೆ ಜಮೀನು ಇತ್ತು. ಮುಳಗಡೆಗೆ ಭೂ ಸ್ವಾಧೀನವಾದ ಬಳಿಕ ಕುಟುಂಬಕ್ಕೆ ೧ ಎಕರೆ ಜಮೀನು ಮಾತ್ರ ಉಳಿಯಿತು. ಭೂಮಿ ಕಳೆದಕೊಂಡ ಮೇಲೆ ಎಷ್ಟು ಹಣ ಬಂದರು ಖರ್ಚಾಗುತ್ತದೆ. ನಂತರ ಬದುಕು ನಡೆಸುವುದು ಬಹಳ ಕಷ್ಟ. ಸಂತ್ರಸ್ತರ ನೋವು ನನಗೆ ಅರಿವು ಇದೆ. ತಮಗೆ ಸೌಲಭ್ಯ ಕಲ್ಪಿಸಲು ಶ್ರಮ ವಹಿಸಲಾಗಿದೆ ಎಂದು ಸಚಿವ ಆರ್.ಅಶೋಕ ಹೇಳಿದರು.
ಕಲಾದಗಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ೬೦ ಲಕ್ಷ ಜನರಿಗೆ ಉಚಿತವಾಗಿ ಕಂದಾಯ ಇಲಾಖೆ ದಾಖಲಾತಿ ನೀಡಿದ್ದೇವೆ. ಕರೆ ಮಾಡಿದ ೭೨ ಗಂಟೆಯಲ್ಲಿ ಅಂಗವಿಕಲರಿಗೆ, ವೃದ್ಧರಿಗೆ ವೇತನ ನೀಡಿದ್ದೇವೆ. ಬಾಗಲಕೋಟೆ ಜಿಲ್ಲೆಯಲ್ಲಿ ೭೨೧೮೫ ಜನರಿಗೆ ೧೦೨ ಕೋಟಿ ರೂ. ಬೆಳೆ ಪರಿಹಾರ ನೀಡಿದ್ದೇವೆ. ೨೬೫೦ ಜನರಿಗೆ ೧೩ ಕೋಟಿ ರೂ. ಮನೆ ಪರಿಹಾರ ನೀಡಿದ್ದೇವೆ. ೯೪ ಸಿ, ೯೪ ಸಿಸಿ ಬದಲಾವಣೆ ತಂದು ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ನಾನು ಇರ್ತೀನೋ ಇಲ್ಲವೋ ಗೊತ್ತಿಲ್ಲ. ಕಾರ್ಯಕ್ರಮ ಶಾಶ್ವತವಾಗಿ ಉಳಿಯಬೇಕು ಎನ್ನುವುದು ನನ್ನ ಉದ್ದೇಶ ಎಂದು ಹೇಳಿದರು.
ಕಾಂಗ್ರೆಸ್ ನೆಂಟರು ಇದ್ದಂತೆ. ಅಧಿಕಾರಕ್ಕೆ ಬಂದು ಹೋಗುತ್ತಾರೆ. ಬಿಜೆಪಿ ಮನೆ ಮಕ್ಕಳು ಇದ್ದಂತೆ ಜನ ಸೇವೆ ಮಾಡುತ್ತಾಲೆ ಇರುತ್ತದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಪದವಿ ವರೆಗೆ ಉಚಿತ್ ಬಸ್ ಪಾಸ್ ನೀಡುತ್ತಿದ್ದೇವೆ. ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಹಾಸ್ಟಲ್ ನಿರ್ಮಿಸಿ ಕೊರತೆಯಾಗದಂತೆ ಜಾಗೃತ ವಹಿಸಿದ್ದೇವೆ. ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಕಾಶ್ಮೀರ, ಪಾಕಿಸ್ತಾನ ಸಮಸ್ಯೆ ಗೊತ್ತೆ ಇಲ್ಲ. ಪಾಕಿಸ್ತಾನದಲ್ಲಿ ಊಟಕ್ಕೆ ಗತಿ ಇಲ್ಲ. ಚಹಾ ಪುಡಿ, ಪೆಟ್ರೋಲ್ ಬೆಲೆ ಸಾವಿರ ದಾಟಿದೆ. ಮುಂದಿನ ೨೦ ವರ್ಷ ಭಾರತ ವಿಶ್ವವನ್ನು ಆಳಲಿದೆ ಅಂತ ಅಮೆರಿಕಾದ ಆರ್ಥಿಕ ತಜ್ಞ ಹೇಳಿದ್ದಾರೆ ಎಂದರು.