ಬಾಗಲಕೋಟೆ: ಸರ್ಕಾರದ ವಿವಿಧ ಇಲಾಖೆಗಳ ಖಾತೆಯಲ್ಲಿನ ಹಣವನ್ನು ವರ್ಗಾವಣೆ ಮಾಡಿ ಲೂಟಿ ಹೊಡೆದಿದ್ದ ಇಲ್ಲಿನ ಐಡಿಬಿಐ ಬ್ಯಾಂಕ್‌ನ ಕೆಲ ಸಿಬ್ಬಂದಿ ಹಾಗೂ ಅಽಕಾರಿಗಳ ಹಣ ದುರುಪಯೋಗದ ಲೆಕ್ಕ ಬಗೆದಷ್ಟು ಇನ್ನು ಹೊರಬರುತ್ತಲೇ ಇದೆ.
ಹೀಗೆ ವ್ಯಕ್ತಿಗಳ ವೈಯಕ್ತಿಕ ಖಾತೆಗಳ ಹಣವನ್ನು ಠೇವಣಿ ಇಡುವುದಾಗಿ ನಂಬಿಸಿ ಒಟ್ಟು ಆರು ಜನರಿಂದ ೫೬.೩೫ ಲಕ್ಷ ರೂ.ಗಳನ್ನು ಠೇವಣಿ ಇಡದೇ ಮೋಸ ಮಾಡಿದ್ದಾರೆಂದು ಸಿದ್ದಪ್ಪ ಗೌಳಿ ಎನ್ನುವವರು ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸೆ. ೨೦ ರಂದು ದೂರು ದಾಖಲಿಸಿದ್ದಾರೆ.
ಐಡಿಬಿಐ ಬ್ಯಾಂಕ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಸೂರಜ್ ಸಗರ ಹಾಗೂ ಬ್ಯಾಂಕ್ ನೌಕರರು ಸೇರಿಕೊಂಡು ೦೮.೧೧.೨೦೨೧ ರಿಂದ ೦೭.೦೩.೨೦೨೪ ಅವಽಯಲ್ಲಿ ಒಟ್ಟು ೫೬.೩೫ ಲಕ್ಷ ರೂ.ಗಳನ್ನು ನಮಗೆ ಮೋಸ ಮಾಡಿ ವಂಚಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರುದಾರರ ಬ್ಯಾಂಕಿನ ಜಂಟಿ ಖಾತೆಯಿಂದ ವಿವಿಧ ದಿನಾಂಕಗಳಲ್ಲಿ ೧೭.೯೦ ಲಕ್ಷ ರೂ, ಅಕ್ರಮವಾಗಿ ಚೆಕ್ ಮೂಲಕ ವಿತಡ್ರಾ ಹಾಗೂ ವರ್ಗಾವಣೆ ಮಾಡಿಕೊಂಡಿದ್ದಾರೆ. ಸಂಬಂಽಕರು ಹಾಗೂ ಸಾಕ್ಷಿದಾರರಾದ ದೀಪಾ ಪ್ರಕಾಶ ಗೌಳಿ ಅವರ ಖಾತೆಯಿಂದ ೬.೪೫ ಲಕ್ಷ ರೂ., ಭಾರತಿ ಅಂಬಾಜಿ ಗೌಳಿ ಅವರ ಖಾತೆಯಿಂದ ೬ ಲಕ್ಷ ರೂ., ಪ್ರೇಮಸಾಯಿ ಪಟ್ಟಣದ ಅವರ ಖಾತೆಯಿಂದ ೧೦ ಲಕ್ಷ ರೂ., ನಸೀಮಾ ಕಂದಗಲ್ ೭ ಲಕ್ಷ ರೂ., ನಾಗೋಜಿ ಬಾಬಾಮಿ ಗೌಳಿ ಅವರಿಂದ ೯ ಲಕ್ಷ ರೋಖ ಹಣವನ್ನು ವಂಚಿಸಿದ್ದಾರೆಂದು ಸಿದ್ದಪ್ಪ ಗೌಳಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರಜ್ ಅವರು, ಖಾತೆಗಳಲ್ಲಿ ಹಣವನ್ನು ತೆಗೆದು ಎ-ï ಡಿ ಮಾಡುವುದಾಗಿ ಹೇಳಿ ಅವರಿಂದ ಚೆಕ್ ಗಳನ್ನು ಪಡೆದುಕೊಂಡಿದ್ದಂತೆ. ಆಯಾ ಹೆಸರಿನಲ್ಲಿ ಎ-ï ಡಿ ಮಾಡದೇ ಅವರಿಗೆ ಗೊತ್ತಾಗದಂತೆ ಚೆಕ್ ಗಳನ್ನು ದುರ್ಬಳಿಕೆ ಮಾಡಿಕೊಂಡು ನಂಬಿಕೆ ದ್ರೋಹ ಮಾಡಿದ್ದಾರೆ. ಸೂರಜ್ ಹಾಗೂ ಬ್ಯಾಂಕಿನವರು ಕೂಡಿಕೊಂಡು ಅಽಕಾರ ದುರುಪಯೋಗ ಪಡಿಸಿಕೊಂಡು ತಮಗೆಲ್ಲ ಮೋಸ ಮಾಡಿದ್ದಾರೆಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಐಡಿಬಿಐ ಬ್ಯಾಂಕಿನಲ್ಲಿ ವಿವಿಧ ಇಲಾಖೆಗಳ ಖಾತೆಗಳ ಹಣವನ್ನು ವರ್ಗಾವಣೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಸಿಇಎನ್ ಠಾಣೆ ಪೊಲೀಸರು ನಡೆಸಿದ ತನಿಖೆ ವೇಳೆ ಪ್ರವಾಸೋದ್ಯಮ, ಅಲ್ಪಸಂಖ್ಯಾತರ ಕಲ್ಯಾಣ, ಪಂಚಾಯತ್ ರಾಜ್ ಇಂಜನಿಯರಿಂಗ್, ಒಬಿಸಿ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ ಸೇರಿ ಒಟ್ಟು ೬,೦೮,೬೨,೫೬೮ ರೂ. ದುರುಪಯೋಗ ಪಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಒಟ್ಟು ೨೮ ಜನರನ್ನು ಬಂಽಸಿದ್ದರು. ಬಳಿಕ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಆ ನಂತರದಲ್ಲಿ ಪ್ರಕರಣದ ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲಾಗಿತ್ತು.
ಇದೀಗ ಮತ್ತೆ ಅದೇ ಬ್ಯಾಂಕಿನಲ್ಲಿ ತಮ್ಮ ಹಣವನ್ನು ದುರುಯೋಗ ಪಡಿಸಿಕೊಂಡಿದ್ದಾರೆಂದು ಮತ್ತೊಂದು ಮತ್ತೊಂದು ಪ್ರಕರಣ ದಾಖಲಾಗಿದೆ.