ಜಿಲ್ಲೆ

ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಮುಖಮುಖಿ ಡಿಕ್ಕಿ.!

ಆಲೂರು : ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆಲೂರು ತಾಲ್ಲೂಕಿನ ಕಾಮತಿ ಕೂಡಿಯಲ್ಲಿ ಭಾನುವಾರ ರಾತ್ರಿ  ನಡೆದಿದೆ. 

ಶೆಟ್ಟಿಹಳ್ಳಿ ಗ್ರಾಮದ ರಂಗರಾಜು ಎಂಬುವರ ಮಗ  ನಯನಕುಮಾರ( 22 ) ಎಂಬಾತನೆ ಮೃತ ದುರ್ದೈವಿಯಾಗಿದ್ದು, ಭಾನುವಾರ ರಾತ್ರಿ 7.30 ರ ಸುಮಾರಿಗೆ ಬಿಕ್ಕೋಡು ಕಡೆಯಿಂದ ಶೆಟ್ಟಿಹಳ್ಳಿ ಗ್ರಾಮಕ್ಕೆ  ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹುಣಸೆ ಗ್ರಾಮ ಹಾಗೂ ಕಾಮುತಿ ಕೂಡಿಗೆ  ಮಧ್ಯ ಬಿಕ್ಕೋಡು ಕಡೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಆತನ ತಲೆಗೆ ತೀವ್ರತರವಾದ ಗಂಭೀರ ಗಾಯಗಳಾದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ವಿಷಯ ತಿಳಿದ ಆಲೂರು ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು.

ಕಳೆದ ವರ್ಷ 22 ರ ಫೆಬ್ರವರಿಯಲ್ಲಿ ಈತನ ತಮ್ಮ  ನವೀನ್ ಎಂಬಾತನು ಸಹ ರಸ್ತೆ  ಅಪಘಾತದಲ್ಲಿ ಮೃತಪಟ್ಟಿದ್ದನು  ತನ್ನ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಶೆಟ್ಟಿಹಳ್ಳಿ ಗ್ರಾಮದ ರಂಗರಾಜು ಕುಟುಂಬದ ಸ್ಥಿತಿಗೆ ಜನರು ಮಮ್ಮಲ ಮರುಗಿದರು