ಬುಕ್ಕಾಪಟ್ಟಣ: ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ಗೋಪಾಲದೇವರಹಳ್ಳಿ ಗ್ರಾಪಂನ ಯರಮಾದನಹಳ್ಳಿಯಲ್ಲಿ ಟ್ರ್ಯಾಕ್ಟರ್ ಹರಿದು ಬಾಲಕಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಯರಮಾದನಹಳ್ಳಿಯ ಶ್ರೀರಂಗಪ್ಪ, ಭಾಗ್ಯಮ್ಮ ದಂಪತಿಯ ದ್ವೀತಿಯ ಪುತ್ರಿ ಪ್ರಕೃತಿ (5) ಮೃತೆ. ಶನಿವಾರ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಳೆ ಬಂದ ಕಾರಣ ಬಾಲಕಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿ ಅಡಿ ಕುಳಿತುಕೊಂಡಿದ್ದಳು. ಇದನ್ನು ಗಮನಿಸದ ಚಾಲಕ, ಟ್ರ್ಯಾಕ್ಟರ್ ಚಲಾಯಿಸಿದ ಪರಿಣಾಮ ಬಾಲಕಿಯ ತಲೆ ಮೇಲೆ ಟ್ರಾ$್ಯಲಿ ಟಯರ್ ಹತ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.