ಜಿಲ್ಲೆ

ಟ್ರ್ಯಾಕ್ಟರ್ ಪಲ್ಟಿ, ಚಾಲಕ ಸಾವು

Vijyapura - Shashikant Mendegar

ವಿಜಯಪುರ: ಟ್ರ್ಯಾಕ್ಟರ್ ಪಲ್ಟಿಯಾದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಅಡಿ ಸಿಲುಕಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಯರಝರಿ ಕ್ರಾಸ್ ಬಳಿ ನಡೆದಿದೆ. ಅಮವಾಸೆ ಹಿನ್ನೆಲೆ ಇಂದು ಪೂಜೆ ಮಾಡಲು ಟ್ರ್ಯಾಕ್ಟರ್ ಸರ್ವಿಸ್ ಗೆ ತೆಗೆದುಕೊಂಡು ಹೋಗಿ ವಾಪಸ್ ಬರುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಟ್ರಾಕ್ಟರ್ ಚಲಾಯಿಸುತ್ತಿದ್ದ ವೇಳೆ ಮೃತಪಟ್ಟ ವ್ಯಕ್ತಿಯನ್ನು ಯರಝರಿ ಗ್ರಾಮದ ನಿವಾಸಿ ಶಿವಪ್ಪ ಬೀರಪ್ಪ ಗುರಿಕಾರ(19) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ‌ಪಿ ಎಸ್ ಐ ಎಂ. ಬಿ. ಬಿರಾದಾರ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.