ಹಾಸನ: ಮೊದಲ ಹಂತದ ಲಘು ಹೃದಯಾಘಾತವಾಗಿ ಆಸ್ಪತ್ರೆಗೆ ಬಂದ 66 ವರ್ಷದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸುವಲ್ಲಿ ಮಂಗಳಾ ಆಸ್ಪತ್ರೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಅಶೋಕ್ ತಿಳಿಸಿದರು.
ಹಾಸನ ತಾಲೂಕಿನ ಬೈರಾಪುರ ಗ್ರಾಮದ ಹುಚ್ಚೇಗೌಡ ಅವರು ಎದೆ ನೋವು ಬಂದಾಗ ಅದನ್ನು ನಿರ್ಲಕ್ಷ್ಯ ಮಾಡಿ ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಸೇವಿಸಿ ಮುಂದುವರೆಯುತ್ತಿದ್ದರು. ಆದರೆ ಅತಿಯಾದ ಎಂದೆನೋವು ಕಾಣಿಸಿಕೊಂಡಾಗ ತಮ್ಮ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕವಾಗಿ ಹೃದಯಕ್ಕೆ ಸಂಬಂಧಿಸಿದ ತಪಾಸಣೆ ನಡೆಸಿದಾಗ ಹೃದಯಾಘಾತವಾಗಿರುವುದು ಬೆಳಕಿಗೆ ಬಂದಿತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಾ. ಶ್ರೀನಿವಾಸ್ ಮತ್ತು ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಎಲ್ಲ ಬ್ಲಾಕ್ಸ್ ಅನ್ನು ಬೈಪಾಸ್ ಮಾಡಿದ್ದಾರೆ. ಆಕ್ಟೇರಿಯಲ್ ಗ್ರಾಪ್ಸ್ (ಎದೆಯ ಒಳ ಭಾಗದ ರಕ್ತ ನಾಳ) ಮತ್ತು ವೆನುಸ್ (ಬಲಗಾಲಿನ ಗೇಟ್ ಸಫೀನಸ್ ವೈನ್) ಒಟ್ಟು 3 ಬೈಪಾಸ್ ಅನ್ನು ಯಶಸ್ವಿಯಾಗಿ ನಿರ್ವಹಿಸಿ, ಸಂಕ್ರಾಂತಿ ಹಬ್ಬದ ದಿನ ವ್ಯಕ್ತಿ ಮರುಜೀವ ದೊರಕಿಸಿಕೊಟ್ಟಿದೆ. ಮೇಜರ್ ಹೃದಯದ ಆಪರೇಶನ್ ಆದ 48 ಗಂಟೆಯೊಳಗೆ ಹುಚ್ಚೇಗೌಡರು ಸಂಪೂರ್ಣವಾಗಿ ಗುಣವಾಗಿ, 4 ದಿನಗಳಲ್ಲಿ ಡಿಸ್ಟಾರ್ಜ್ ಆಗಿ ಮನೆಗೆ ಹೋಗಿದ್ದಾರೆ ಎಂದರು.
ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಡಾ. ಸೀಮಾ, ಡಾ. ಆಶೀಶ್ ಶ್ರೀಧರ್, ಡಾ. ಶ್ರೀನಿವಾಸ್, ಚಿಕಿತ್ಸೆ ಪಡೆದ ಹುಚ್ಚೇಗೌಡ ಇತರರು ಇದ್ದರು.