ಪುರಸಭೆಗೆ ಸೇರಿದ ಟ್ರಾೃಕ್ಟರ್ ಟ್ರ್ಯಾಲಿ ತುಂಡಾಗಿ ಮಧ್ಯರಸ್ತೆಯಲ್ಲಿ ತ್ಯಾಜ್ಯ ಹರಡಿರುವುದು. 
ಜಿಲ್ಲೆ

ಟ್ರ್ಯಾಲಿ ಮುರಿದು ರಸ್ತೆಗೆ ಹರಡಿದ ತ್ಯಾಜ್ಯ

ಸಕಲೇಶಪುರ: ಕಸ ಸಾಗಿಸುತ್ತಿದ್ದ ವೇಳೆ ಪುರಸಭೆಗೆ ಸೇರಿದ ಟ್ರಾೃಕ್ಟರ್ ಟ್ರ್ಯಾಲಿ ಶನಿವಾರ ಮುರಿದು ಬಿದ್ದು ಮುಖ್ಯರಸ್ತೆ ತುಂಬ ತ್ಯಾಜ್ಯ ಹರಡಿತ್ತು.

ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದ್ದ ಹಳೇ ಟ್ರಾೃಕ್ಟರ್‌ನಲ್ಲೆ ಪುರಸಭೆ ತ್ಯಾಜ್ಯವನ್ನು ಸಾಗಿಸಲಾಗುತ್ತಿತ್ತು. ಎರಡು ದಿನಗಳ ಹಿಂದೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಟ್ರಾೃಕ್ಟರ್ ದುಸ್ಥಿಯ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದಾದ ಎರಡು ದಿನದಲ್ಲೆ ಕಸ ಸಾಗಿಸುವ ವೇಳೆ ಮಧ್ಯ ರಸ್ತೆಯಲ್ಲೆ ಟ್ರಾೃಕ್ಟರ್ ಟ್ರ್ಯಾಲಿ ಕಳಚಿಬಿದ್ದಿದ್ದು, ರಸ್ತೆಯಲ್ಲೆಲ್ಲ ತ್ಯಾಜ್ಯ ಹರಡಿ ಹಲವು ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಟ್ರಾೃಕ್ಟರ್ ಅರ್ಹತೆ (ಎಫ್‌ಸಿ) ಪ್ರಮಾಣ ಪತ್ರದ ಅವಧಿ ಮುಗಿದು ಹಲವು ವರ್ಷ ಕಳೆದಿರುವುದು ತಪಾಸಣೆ ವೇಳೆ ತಿಳಿದುಬಂದಿದೆ.