Oplus_0ಯರಿಯೂರು ಗ್ರಾಮದಿಂದ ಮದ್ದೂರು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬೈಕ್ ಟ್ರಾೃಕ್ಟರ್‌ನ ಟ್ರಾಲಿಗೆ ಡಿಕ್ಕಿಯಾಗಿರುವುದು.  
ಜಿಲ್ಲೆ

ಟ್ರಾಲಿಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವು

ಯಳಂದೂರು: ತಾಲೂಕಿನ ಯರಿಯೂರಿನಿಂದ ಮದ್ದೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 948ರಲ್ಲಿ ನಿಂತಿದ್ದ ಟ್ರಾೃಕ್ಟರ್‌ನ ಟ್ರಾಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೋಮವಾರ ರಾತ್ರಿ ಸ್ಥಳದಲ್ಲೇ ಸವಾರ ಮೃತಪಟ್ಟಿದ್ದಾನೆ.

ಚಾಮರಾಜನಗರ ತಾಲೂಕಿನ ಕೋಟಂಬಳ್ಳಿ ಗ್ರಾಮದ ನಿವಾಸಿ ನಂದಕುಮಾರ್(22) ಮೃತಪಟ್ಟವ. ಕೊಳ್ಳೇಗಾಲ ಪಟ್ಟಣದ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿರುವ ಈತ ಕೆಲಸ ಮುಗಿಸಿ ಗ್ರಾಮಕ್ಕೆ ಹೋಗುತ್ತಿದ್ದ. ಮಹಾರಾಷ್ಟ್ರ ನೋಂದಣಿಯ ಟ್ರಾೃಕ್ಟರ್ 2 ಟ್ರಾಲಿಯಲ್ಲಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದು, ಮಳೆ ಬಂದ ಕಾರಣ ರಸ್ತೆ ಪಕ್ಕದಲ್ಲಿದ್ದ ಟೀ ಅಂಗಡಿಗೆ ತೆರಳೆಂದು ವಾಹನವನ್ನು ನಿಲ್ಲಿಸಿ ಹೋಗಿದ್ದಾನೆ.

ಈ ವೇಳೆ ಬೈಕ್ ರಸ್ತೆಯ ಮಧ್ಯದಲ್ಲಿದ್ದ ಟ್ರಾಲಿಗೆ ಗುದ್ದಿದ್ದು, ಸವಾರನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಮೃಪಟ್ಟಿದ್ದಾನೆ. ಘಟನೆ ಬಳಿಕ ಟ್ರಾೃಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.