ಜಿಲ್ಲೆ

ಟ್ರಾಫಿಕ್ ನಿಯಂತ್ರಣಕ್ಕೆ ಲಾಠಿ ಹಿಡಿದ ತಹಸೀಲ್ದಾ

ಕೆಂಭಾವಿ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಖುದ್ದು ತಹಸೀಲ್ದಾರ್ ವಿಜಯಕುಮಾರ ಕೈಯಲ್ಲಿ ಲಾಠಿ ಹಿಡಿದು ರಸ್ತೆ ಅಕ್ಕಪಕ್ಕದ ಗೂಡಂಗಡಿ ಹಾಗೂ ವಾಹನಗಳನ್ನು ತೆರವುಗೊಳಿಸಿದ ಪ್ರಸಂಗ ಶುಕ್ರವಾರ ನಡೆಯಿತು.

ಬಹಳ ದಿನಗಳಿಂದ ಪಟ್ಟಣದಲ್ಲಿ ರಸ್ತೆ ಪಕ್ಕ ಅತಿಕ್ರಮಿಸಿದ್ದ ಹಣ್ಣು, ತರಕಾರಿ ಮಾರುವ ತಳ್ಳು ಬಂಡಿ ಹಾಗೂ ಖಾಸಗಿ ವಾಹನಗಳಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದರು. ಈ ಕುರಿತು ಹಲವು ಬಾರಿ ಪತ್ರಿಕೆ ವರದಿಯೂ ಮಾಡಿತ್ತು. ಸಮಸ್ಯೆಯ ಗಂಭೀರತೆ ಅರಿತ ತಹಸೀಲ್ದಾರ್ ವಿಜಯಕುಮಾರ ಶುಕ್ರವಾರ ಮಧ್ಯಾಹ್ನ ೧ರ ಸುಮಾರಿಗೆ ಆಗಮಿಸಿ ಬಸವೇಶ್ವರ ವೃತ್ತದಿಂದ ಡಾ.ಅಂಬೇಡ್ಕರ್ ವೃತ್ತ ಹಾಗೂ ಸಂಜೀವ ನಗರವರೆಗಿನ ಮುಖ್ಯ ರಸ್ತೆಯಲ್ಲಿದ್ದ ಎಲ್ಲ ಗೂಡಂಗಡಿ ಮತ್ತು ವಾಹನಗಳನ್ನು ತೆರವುಗೊಳಿಸಿದರು. ಪಿಎಸ್‌ಐ ರಾಜಶೇಖರ ರಾಠೋಡ್, ಎಎಸ್‌ಐ ಬಲರಾಮ, ಕಂದಾಯ ನಿರೀಕ್ಷಕ ರಾಜೇಸಾಬ್ ಇತರರಿದ್ದರು.

ಪುರಸಭೆ ಅಧಿಕಾರಿ ತರಾಟೆಗೆ : ತಹಸೀಲ್ದಾರ್ ವಿಜಯಕುಮಾರ ಹಾಗೂ ಪಿಎಸ್‌ಐ ರಾಜಶೇಖರ ರಾಠೋಡ್ ಅವರು ರಸ್ತೆ ಅತಿಕ್ರಮಿಸಿದ ಅಂಗಡಿ ಮತ್ತು ವಾಹನಗಳ ತೆರವಿಗೆ ಮುಂದಾಗಿ ಒಂದು ಗಂಟೆಯಾದರೂ ಪುರಸಭೆ ಅಧಿಕಾರಿಯಾಗಲಿ ಮತ್ತು ಸಿಬ್ಬಂದಿಯಾಗಲಿ ಬರಲಿಲ್ಲ. ಸಿಡಿದೆದ್ದ ತಹಸೀಲ್ದಾರ್ ದೂರವಾಣಿಯಲ್ಲಿ ಪುರಸಭೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಒಂದು ಗಂಟೆ ತಡವಾಗಿ ಪುರಸಭೆ ಸಿಬ್ಬಂದಿ ಆಗಮಿಸಿ ಟ್ರಾÈಕ್ಟರ್ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.