ಸುಂಟಿಕೊಪ್ಪ 1ನೇ ವಿಭಾಗ ಹಾಗೂ 3ನೇ ವಿಭಾಗದಲ್ಲಿ ಸೆಸ್ಕ್ ನೂತನ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಯಿತು. ಪಿ.ಆರ್.ಸುನಿಲ್‌ಕುಮಾರ್, ಪಿ.ಎಫ್.ಸಬಾಸ್ಟಿನ್, ಶಬ್ಬಿರ್, ಮಂಜುನಾಥ್, ಲವಕುಮಾರ್ ಹಾಗೂ ಸಿಬ್ಬಂದಿ ಇದ್ದರು. 
ಜಿಲ್ಲೆ

ಟ್ರಾನ್ಸ್‌ಫಾರ್ಮರ್ ಅಳವಡಿಸಿದ ಸೆಸ್ಕ್

ಸುಂಟಿಕೊಪ್ಪ: ಮಂದ ಬೆಳಕಿನ ಸಮಸ್ಯೆ ಅನುಭವಿಸುತ್ತಿದ್ದ ಸುಂಟಿಕೊಪ್ಪ 1ನೇ ವಿಭಾಗ ಹಾಗೂ 3ನೇ ವಿಭಾಗದಲ್ಲಿ ಸೆಸ್ಕ್ ನೂತನ ಟ್ರಾನ್ಸ್‌ಫಾರ್ಮರ್ ಅಳವಡಿಸಿದೆ.

ಕಳೆದ ಹಲವು ದಿನಗಳಿಂದ ಸುಂಟಿಕೊಪ್ಪ 1ನೇ ವಿಭಾಗದ ಗುಡ್ಡಪ್ಪ ರೈ, ಶಿವರಾಮ ರೈ ಬಡಾವಣೆ ಹಾಗೂ ಮಾಸ್ಟರ್ ಬಡಾವಣೆಯ ನಿವಾಸಿಗಳಿಗೆ ಮಂದ ಬೆಳಕಿನ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಈ ಭಾಗದ ಗ್ರಾಪಂ ಸದಸ್ಯರ ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಕೈಗೊಂಡ ನಿರ್ಣಯದಂತೆ ಪಂಚಾಯಿತಿ ವತಿಯಿಂದ ಸೆಸ್ಕ್‌ಗೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು.

ಕಿರಿಯ ಇಂಜಿನಿಯರ್ ಲವಕುಮಾರ್ ಸ್ಥಳ ಪರಿಶೀಲನೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದ ಮೇರೆಗೆ ಇಲಾಖೆ ಸುಂಟಿಕೊಪ್ಪ 1ನೇ ವಿಭಾಗದ ಗುಡ್ಡಪ್ಪ ರೈ, ಶಿವರಾಮ ರೈ ಬಡಾವಣೆ 25 ಕೆವಿ ಹಾಗೂ ಮಾಸ್ಟರ್ ಬಡಾವಣೆಗೆ 65 ಕೆವಿ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಮೂಲಕ ಈ ಭಾಗದ ನಿವಾಸಿಗಳು ಅನುಭವಿಸುತ್ತಿದ್ದ ಮಂದಬೆಳಕಿನ ಸಮಸ್ಯೆಯನ್ನು ನೀಗಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಸದಸ್ಯರಾದ ಪಿ.ಎಫ್.ಸಬಾಸ್ಟಿನ್, ಶಬ್ಬಿರ್ ಸೆಸ್ಕ್ ಎಇಇ ಮಂಜುನಾಥ್ ಹಾಗೂ ಜೆಇ ಲವಕುಮಾರ್ ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.