ಟ್ರಾಕ್ಟರ್ ಎಕ್ಸಲ್ ತುಂಡಾಗಿ ಟೇಲರ್ ಪಲ್ಟಿ : ಸ್ಥಳದಲ್ಲಿಯೇ ಓರ್ವ ಯುವಕ ಸಾವು
ಚಿಕ್ಕೋಡಿ: ಟ್ರಾಕ್ಟರ್ ಎಕ್ಸಲ್ ತುಂಡಾದ ಪರಿಣಾಮ ನಿಯಂತ್ರಣ ತಪ್ಪಿ ಟ್ರಾಕ್ಟರ್ ಟೇಲರ್ ಪಲ್ಟಿಯಾಗಿ ಓರ್ವ ಯುವಕ ಸ್ಥಳದಲ್ಲಿ ಮೃತನಾಗಿರುವ ಘಟನೆ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಕ್ರಾಸ್ ಬಳಿ ಶನಿವಾರ ನಡೆದಿದೆ.
ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ನಿವಾಸಿ ಸಿದ್ದಪ್ಪ ಹಂಜಿ (22) ಮೃತ ಯುವಕ.ವಿಜಯಪುರ ಬಬಲಾದಿ ಜಾತ್ರೆಯಿಂದ ಹಿಂದಿರುಗಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಟ್ಯಾಕ್ಟರ್ ಟೈಲರ್ ನಲ್ಲಿ 25 ಕ್ಕೂ ಹೆಚ್ಚು ಜನ ಬಬಲಾದಿಗೆ ತೆರಳಿದ್ದರು.ಹಿಂದಿರುಗಿ ಬರುವಾಗ ಅಪಘಾತ ನಡೆದಿದೆ.ಗಾಯಾಳು ಎಲ್ಲರೂ ಮಂಟೂರ ಗ್ರಾಮದವರು.ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.