ಹುಬ್ಬಳ್ಳಿ: ನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ದೇಶಪಾಂಡೆ ಎಜುಕೇಷನ್ ಟ್ರಸ್ಟ್ನ ಟೋಸ್ಟಮಾಸ್ಟರ್ ಕ್ಲಬ್ ಪದಾಧಿಕಾರಿಗಳ ಆಯ್ಕೆ ಭಾನುವಾರ ನಡೆಯಿತು. ರೋಹನ ಕುಲಕರ್ಣಿ ಪ್ರಮಾಣವಚನ ಬೋಧಿಸಿದರು.
ಕ್ಲಬ್ ಅಧ್ಯಕ್ಷರಾಗಿ ನಿತೀಶ ಗಡಗೇರಿ, ಶಿಕ್ಷಣ ವಿಭಾಗದ ಉಪಾಧ್ಯಕ್ಷರಾಗಿ ಆಕಾಂಕ್ಷಾ ಕುಲಕರ್ಣಿ, ಸದಸ್ಯತ್ವದ ವಿಭಾಗದ ಉಪಾಧ್ಯಕ್ಷರಾಗಿ ನಂದೀಶ ಕಮ್ಮಾರ, ಸಾರ್ವಜನಿಕ ಸಂಬಂಧಗಳ ಉಪಾಧ್ಯಕ್ಷರಾಗಿ ಕಾಂಚನ ಪವಾರ, ಕಾರ್ಯದರ್ಶಿಯಾಗಿ ಮೇಹಕ್ ಭಾಲಾ, ಖಜಾಂಚಿಯಾಗಿ ರಾಘವ ಅಗರವಾಲ, ಶಿಸ್ತು ಮತ್ತು ಸುರಕ್ಷಾ ವಿಭಾಗ ಉಪಾಧ್ಯಕ್ಷರಾಗಿ ಸಂದೀಪ ಪಾಟೀಲ ಪ್ರಮಾಣವಚನ ಸ್ವೀಕರಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನಿತೀಶ ಗಡಗೇರಿ ಮಾತನಾಡಿ, ಸಂಸ್ಥೆಯ ಬೆಳವಣಿಗೆಯ ಬಗ್ಗೆ ತಮ್ಮ ದೃಷ್ಟಿಕೋನ ಮತ್ತು ಆಶಯಗಳನ್ನು ಹಂಚಿಕೊಂಡರು. ಕುಮಾರನ್ ಪೇಥಿ ಅವರು ‘ಇಚ್ಛಾಶಕ್ತಿಯಿದ್ದಲ್ಲಿ ಮಾತುಕತೆ ಸಾಧ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್ ಎಂಡಿ ಶಿವಾ ಸಂಕೇಶ್ವರ, ಪ್ರಕಾಶ ಸಂಕನೂರ ಇತರರು ಇದ್ದರು.