ಬಸವಕಲ್ಯಾಣದಲ್ಲಿ ಟೋಕರಿ ಕೋಳಿ ಸಮಾಜ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಖಾ ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಸರಸ್ವತಿ ಜಮಾದಾರ, ಜಗನ್ನಾಥ ಜಮಾದಾರ, ಸುನೀಲಕುಮಾರ ಖಾಶೆಂಪುರೆ ಇತರರಿದ್ದರು. 
ಜಿಲ್ಲೆ

ಟೋಕರಿ ಕೋಳಿ ಸಮಾಜ ಸಂಘಕ್ಕೆ ನೇಮಕ

ಬಸವಕಲ್ಯಾಣ: ಟೋಕರಿ ಕೋಳಿ ಸಮಾಜ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯP್ಷÀರಾಗಿ ರೇಖಾ ರಾಜಕುಮಾರ ಹೊಸಮನಿ ನೇಮಕಗೊಂಡಿದ್ದಾರೆ. ಸಂಘದ ಜಿಲ್ಲಾಧ್ಯP್ಷÀ ಜಗನ್ನಾಥ ಜಮಾದಾರ ಅಧ್ಯP್ಷÀತೆಯಲ್ಲಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಚರ್ಚೆ ನಡೆಸಿ ಸರ್ವಾನುಮತದಿಂದ ನೇಮಕ ಮಾಡಲಾಗಿದೆ. ಕೂಡಲೇ ಜವಾಬ್ದಾರಿ ವಹಿಸಿಕೊಂಡು ತಾಲೂಕಿನಲ್ಲಿ ಸಂಘವನ್ನು ಬಲಪಡಿಸಲು ಶ್ರಮಿಸಬೇಕು ಎಂದು ಜಮಾದಾರ ಸೂಚಿಸಿದ್ದಾರೆ. ಜಿಲ್ಲಾ ಉಪಾಧ್ಯP್ಷÀ ಸುನೀಲಕುಮಾರ ಖಾಶೆಂಪುರೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸರಸ್ವತಿ ಜಮಾದಾರ, ಅಂಬಿಗರ ಚೌಡಯ್ಯ ಯುವಸೇನೆ ಜಿಲ್ಲಾಧ್ಯP್ಷÀ ಸುನೀಲ ಭಾವಿಕಟ್ಟಿ, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಸಿತಾಳಗೇರಾ, ಸಹ ಕಾರ್ಯದರ್ಶಿ ಮಾರುತಿ ಮಾಸ್ಟರ್, ಪ್ರಮುಖರಾದ ಪಾರ್ವತಿ ಸೋನಾರೆ, ಅಪ್ಪಾರಾವ ಹಣಕುಣಿ, ಶಂಕರರಾವ ಜಮಾದಾರ, ಬಾಬುರಾವ ವಳಖಿಂಡಿ, ರೇಖಾ ರಾಜು, ಡಾ.ಶರಣಪ್ಪ ಗದಲೇಗಾಂವ, ರಾಜಕುಮಾರ ಹೊಸಮನಿ, ಗುರುನಾಥ ಮೈಲಾರೆ, ರಾಜು ಯರಂಡಿ, ಚಿತ್ರಮ್ಮ ಸಂತೋಷಿ, ಜ್ಯೋತಿ, ಮಾಯಾವತಿ, ಸಪ್ನಾ, ಸುಜಾತಾ, ಸಿದ್ರಾಮ ಚಿಟ್ಟಾ, ಸುನೀಲ ಪೂಜಾರಿ ಇತರರಿದ್ದರು.