ಜಿಲ್ಲೆ

ಟೈಲರ್ ಅಸೋಸಿಯೇಷನ್ ವತಿಂಯಿಂದ ಆರೋಗ್ಯ ಶಿಬಿರ

ಹಾಸನ: ಪ್ರತಿಯೊಬ್ಬ ಮನುಷ್ಯರಿಗೂ ಹಣಕ್ಕಿಂತ ಆರೋಗ್ಯ ಪ್ರಮುಖವಾದದ್ದು, ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಕಾರ್ಮಿಕ ಅಧಿಕಾರಿ ಎನ್.ಯಮುನಾ ಕಿವಿ ಮಾತು ಕೇಳಿದರು.

ನಗರದ ಅಡ್ಲಿ ಮನೆ ರಸ್ತೆಯಲ್ಲಿರುವ ಎಸ್.ವಿ.ಎಂ. ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಆರೋಗ್ಯ ಚೆನ್ನಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.

ಟೈಲರ್ ವೃತ್ತಿ ಮಾಡುವವರು ಬಹುತೇಕರು ನಾನಾ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಅಂತವರಿಗೆ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನ ಸಂಘದವರು ಆಯೋಜಿಸುವ ಮೂಲಕ ಇತರೆ ಸಂಘಗಳಿಗೆ ಮಾದರಿಯಾಗಿದ್ದಾರೆ ಎಂದರು.

ರಾಜ್ಯ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಎಸ್. ವೆಂಕಟೇಶ್ ಮಾತನಾಡಿ, ನಮ್ಮ ಸಂಘದ ವತಿಯಿಂದ ಸದ್ಯಸರಿಗೆ ಕಣ್ಣುನ ಪರೀಕ್ಷೆ, ರಕ್ತದ ಸಮಸ್ಯೆ ಸೇರಿದಂತೆ ಹಲವು ರೋಗಗಳ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕೆ ಹಲವು ಸಂಘ ಸಂಸ್ಥೆಗಳು ಸಹಕಾರದಿಂದ ಆಯೋಜಿಸಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು

ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ನೂರಾರು ಟೈಲರ್ಸ್‌ ಕುಟುಂಬದವರು ಪಾಲ್ಗೊಂಡು ಅದರ ಸದುಪಯೋಗ ಪಡೆದುಕೊಂಡರು.

ಇದೆ ವೇಳೆ ಲಯನ್ಸ್ ಕ್ಲಬ್ ಕ್ಯಾಬಿನೆಟ್ ಸದಸ್ಯ ಹೆಚ್.ಆರ್. ಚಂದ್ರೇಗೌಡ, ಖಜಾಂಚಿ ಬಿ.ಎಂ. ರವಿಕುಮಾರ್ ಬಲ್ಲೇನಹಳ್ಳಿ, ಹೆಚ್.ಪಿ. ಶಶಾಂಕ್, ಲಕ್ಷ್ಮಣ್ ರಾವ್, ಪ್ರಧಾನ ಕಾರ್ಯದರ್ಶಿ ಎಸ್.ಪಿ. ಸತ್ಯನಾರಾಯಣ, ಖಜಾಂಚಿ ಕೆ.ಎಸ್. ಶಂಕರೇಗೌಡ, ಮಾಜಿ ಅಧ್ಯಕ್ಷ ಡಿ.ಹೆಚ್. ಧರ್ಮಶೆಟ್ಟಿ, ವೈದ್ಯರಾದ ಚಂದನ್, ಶಂಕರ್ ಲಾಲ್, ಬಿ.ಎಂ, ನಾಗೇಂದ್ರ ಇತರರು ಉಪಸ್ಥಿತರಿದ್ದರು.