ಬಾಗಲಕೋಟೆ ನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ೧೪ ನೇ ಘಟಿಕೋತ್ಸವದಲ್ಲಿ ೧೭ ಚಿನ್ನದ ಪದಕ ಪಡೆದ ಸಹನಾ ಅವರಿಗೆ ತಂದೆ ಮಂಜುನಾಥ, ತಾಯಿ ಶೋಭಾ ಸಿಹಿ ಮುತ್ತು ನೀಡಿ ಸಂಭ್ರಮಿಸುತ್ತಿರುವುದು.  
ಜಿಲ್ಲೆ

ಟೇಲರ್ ಪುತ್ರಿ ತೋವಿವಿಗೆ ಟಾಫರ...!!

ಸಂತೋಷ ದೇಶಪಾಂಡೆ ಬಾಗಲಕೋಟೆ:

ಅಪ್ಪ ಟೇಲರಿಂಗ್ ಕೆಲಸ ಮಾಡುತ್ತಾರೆ. ಅಮ್ಮ ಗೃಹಿಣಿ. ಬಡತನವಿದ್ದರು ಓದಿಗೆ ಅಡ್ಡಿ ಬಂದಿಲ್ಲ. ಶ್ರಮ ವಹಿಸಿ ಓದಿದಳು. ಅದಕ್ಕೆ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ಚಿನ್ನದ ಬೆಡಿಗೆಯಾಗಿ ಹೊರಹೊಮ್ಮಿದಳು...!!

ಹೌದು, ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ೧೪ನೇ ಘಟಿಕೋತ್ಸವದಲ್ಲಿ ೧೭ ಚಿನ್ನದ ಪದಕ ಪಡೆದ ಸಹನಾ ಪಟಿಗೆ ಅವರ ಯಶಸ್ಸಿನ ಹಾದಿ ಇದು. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಬಸವೇಶ್ವರ ನಗರದ ನಿವಾಸಿರುವ ಸಹನಾ ತೋವಿವಿ ಟಾಫರ ಹೊರ ಹೊಮ್ಮಿದ್ದಾಳೆ. ಉತ್ತಮ ಅಂಕ ಪಡೆದು ಇತರರಿಗೆ ಪ್ರೇರಣಾ ಶಕ್ತಿಯಾಗಿದ್ದಾಳೆ. ತಂದೆ ಮಂಜುನಾಥ,ತಾಯಿ ಶೋಭಾ ಹಿರಿಯ ಹಿರಿಯ ಪುತ್ರಿಯಾಗಿರುವ ಸಹನಾ ತಮ್ಮ ಮಗಳ ಸಾಧನೆಗೆ ಖುಷಿಗೊಂಡರು.

ತಂದೆ ಮಂಜುನಾಥ ಪಟಿಗೆ ಟೇಲರಿಂಗ್ ವೃತ್ತಿ ಮಾಡುತ್ತಿದ್ದಾರೆ. ನಾಲ್ಕು ಎಕರೇ ಜಮೀನು ಇದ್ದು, ಚಿಕ್ಕದಾಗಿ ಜೀವನ ಕಟ್ಟಿಕೊಂಡಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವದರಲ್ಲಿ ಹಿಂದೆ-ಮುAದೆ ನೀಡಿಲ್ಲ. ಸಹನಾ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಓದಿ ಶೇ.೯೮.೪೦ ಅಂಕ ಪಡೆದುಕೊಂಡಿದ್ದಾರೆ. ಎಂ.ಎA.ಪಾಟೀಲ ಪಿಯುಸಿ ಕಾಲೇಜಿನಲ್ಲಿ ಪಿಯುಸಿ ಓದಿ ಶೇ.೮೬ ಅಂಕ ಪಡೆದುಕೊಂಡಿದ್ದಾರೆ. ಬೀದರನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಪದವಿ ಓದಿದ್ದಾರೆ. ಕೋಯುಮುತ್ತುರಿನಲ್ಲಿ ಸ್ನಾತಕೋತ್ತರ ಪದವಿ ಹಣ್ಣು-ತರಕಾರಿ ವಿಷಯದಲ್ಲಿ ಸದ್ಯ ಓದುತ್ತಿದ್ದಾರೆ.

ನಮ್ಮ ತಂದೆ, ತಾಯಿ ಕಷ್ಟ ಪಟ್ಟು ಓದಿಸಿದ್ದಾರೆ. ಮುಂದೆಯು ಓದಬೇಕು ಎನ್ನುವ ಆಸೆ ನನಗೆ. ಪ್ರಮಾಣಿಕ ಪ್ರಯತ್ನಕ್ಕೆ ಫಲ ದೊರೆಯುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ತಂದೆ ಸಾಲ ಮಾಡದೇ ಎಲ್ಲವನ್ನು ನಿಭಾಯಿಸಿ ಶಿಕ್ಷಣ ಕೊಟ್ಟಿದ್ದಾರೆ ಅದೇ ನನಗೆ ಹೆಮ್ಮೆಯ ವಿಷಯ. ಕೃಷಿ, ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಸಂಶೋಧನೆ, ಆವಿಷ್ಕಾರಗಳು ನಡೆಯುತ್ತವೆ. ಅವುಗಳ ಲ್ಯಾಬನಲ್ಲಿ ಉಳಿಯಬಾರದು. ಕೃಷಿಕರಿಗೆ ತಲುಪಬೇಕು. ಅವರ ಸಮಸ್ಯೆಗೆ ಮುಕ್ತಿ ಸಿಗಬೇಕು. ಅವರ ಆದಾಯ ವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಅಂತ ಸಹನಾ ಪಟಗೆ `ವಿಜಯವಾಣಿ'ಯೊಂದಿಗೆ ಹಂಚಿಕೊ0ಡರು.

ಹನಾ ಅವರಿಗೆ ಸಹೋದರ ಸಾಗರ ಎಂಬಿಬಿಎಸ್ ವೈದ್ಯಕೀಯ ಪದವಿ ಓದುತ್ತಿದ್ದಾರೆ. ಸಹೋದರಿಗೆ ಸೌಮ್ಯ ಬಿಎಸ್‌ಸಿ ನರ್ಸಿಂಗ್ ಓದುತ್ತಿದ್ದಾಳೆ. ಯಾವುದೇ ಡೊನೇಷನ್ ಇಲ್ಲದೇ ಸರ್ಕಾರಿ ಶುಲ್ಕದಲ್ಲಿಯೇ ಶಿಕ್ಷಣ ಕಲಿಯುತ್ತಿರುವುದು, ಅದರಲ್ಲೂ ಟಾಟಾಫರರಗಳಾಗಿ ಹೊರಮ್ಮಿರುವುದು ಮಾದರಿಯಾಗಿದೆ.