ಜಿಲ್ಲೆ

ಟೆಲಿಗ್ರಾಂ ಮೆಸೇಜ್ ನಂಬಿ ಹಣ ಕಳೆದುಕೊಂಡರು

ಆರ್.ಕೃಷ್ಣ

ಮೈಸೂರು: ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಬಂದ ಟೆಲಿಗ್ರಾಂ ಮೆಸೇಜ್‌ನಂಬಿ ಬೋಗಾದಿ ನಿವಾಸಿಯೊಬ್ಬರು 22.15 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಷೇರು ಮಾರುಕಟ್ಟೆ ಕುರಿತ ಟೆಲಿಗ್ರಾಂ ಗ್ರೂಪ್‌ಗೆ ಇವರು ಸೇರಿದ್ದಾರೆ. ನಂತರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರುವಂತೆ ಸಂದೇಶ ಬಂದಿದೆ. ಷೇರು ಮಾರುಕಟ್ಟೆ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಲಕ್ಷಾಂತರ ರೂ. ಗಳಿಸಬಹುದು ಎಂದು ಆಸೆ ಹುಟ್ಟಿಸಿದ್ದಾರೆ. ಅವರ ಮಾತನ್ನು ನಂಬಿದ ಅವರು ಹಂತ, ಹಂತವಾಗಿ 22.15 ಲಕ್ಷ ರೂ. ಅನ್ನು ಅವರು ಹೇಳಿದ ಖಾತೆಗೆ ಹಾಕಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.