ಅರುಣ್ ಈಸೂರು 
ಜಿಲ್ಲೆ

ಟೆನಿಸ್‌ನಲ್ಲಿ ಅರುಣ್ ದ್ವಿತೀಯ

ಆಯನೂರು: ಬಳ್ಳಾರಿಯಲ್ಲಿ ನಡೆದ ರಾಷ್ಟ್ರ ಮಟ್ಟದ 16ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳ ಟೆನಿಸ್ ಚಾಂಪಿಯನ್ ಸೀರಿಸ್ 7 ಪಂದ್ಯಾವಳಿಯಲ್ಲಿ ಶಿವಮೊಗ್ಗ ಟೆನಿಸ್ ಕ್ಲಬ್‌ನ ಅರುಣ್ ಆರ್. ಈಸೂರು ದ್ವಿತೀಯ ಬಹುಮಾನ ಪಡೆದಿದ್ದಾನೆ.

ಪಂದ್ಯಾವಳಿಯಲ್ಲಿ ಅರುಣ್ ಹಾಗೂ ಋತ್ವಿಕ್ ಭಾಗವಹಿಸಿದ್ದರು. ಋತ್ವಿಕ್ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಮೇನ್ ಡ್ರಾಗೆ ಅರ್ಹತೆ ಹೊಂದಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದಾನೆ. ಅರುಣ್ ಆರ್ ಈಸೂರು ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ೈನಲ್ ಪ್ರವೇಶಿಸಿ, ಡಬಲ್ಸ್ ವಿಭಾಗದಲ್ಲಿ ದಾವಣಗೆರೆಯ ತರುಣ್ ಜತೆಗೂಡಿ ಅಂತಿಮ ಸುತ್ತು ಪ್ರವೇಶಿಸಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈತ ಲೀನಾ ಹಾಗೂ ಡಾ. ಎಂ.ರವಿ ಇವರ ಪುತ್ರನಾಗಿದ್ದು, ಶಿವಮೊಗ್ಗದ ಸೇಂಟ್ ಜೋಸ್ೆ ಅಕ್ಷರಧಾಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ.