ಜಿಲ್ಲೆ

ಟೀಕೆಗಳಿಗೆ ಅಭಿವೃದ್ಧಿಯೇ ಉತ್ತರ

ತೆಲಸಂಗ: ಕಾಯಕಯೋಗಿ ತನ್ನ ಕರ್ತವ್ಯ ನಿರ್ವಹಣೆಯಲ್ಲೇ ಲೀನನಾಗಿರುತ್ತಾನೆ. ಇನ್ನೊಬ್ಬರ ಕಾಲೆಳೆದು ಸಾರ್ವಭೌಮತ್ವ ಸಾಧಿಸಲು ಹೊರಟ ವ್ಯಕ್ತಿ ಜನರನ್ನು ತಪ್ಪು ದಾರಿಗೆಳೆಯುತ್ತಾನೆ. ಅಂಥವನಿಂದ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ. ಟೀಕೆಗಳಿಗೆ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತರ ಕೊಡೋಣ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಂಡೆನ್ ಹಳ್ಳದ ೮೨ ಲಕ್ಷ ರೂ.ಗಳಲ್ಲಿ ಬೂದು ನೀರು ನಿರ್ವಹಣೆ ಘಟಕದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಲಕ್ಷ್ಮಣ ಸವದಿ ಅವರದು ಭರವಸೆಯ ರಾಜಕಾರಣವಲ್ಲ, ಮೌಲ್ಯಯುತ ರಾಜಕಾರಣ. ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕರಿಮಸೂತಿ ಏತ ನೀರಾವರಿ, ಅಮ್ಮಾಜೇಶ್ವರಿ ಏತ ನೀರಾವರಿ, ಕೆರೆ ತುಂಬಿಸುವ ಯೋಜನೆ, ಗುಣಮಟ್ಟದ ವಿದ್ಯುತ್, ರಸ್ತೆ, ನೀರು ಸೇರಿದಂತೆ ಸಹಕಾರಿ ಕ್ಷೇತ್ರದ ಮೂಲಕ ರೈತರಿಗೆ ಆರ್ಥಿಕ ಶಕ್ತಿ ತುಂಬಿ ಅಥಣಿಯನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ ಎಂದರು.

ಮಾಜಿ ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಡಾ.ಆರ್.ಡಿ.ಪೂಜಾರಿ, ಧರೇಪ್ಪ ಮಾಳಿ, ಕಾಶಿನಾಥ ಲೋಕಂಡೆ, ರಾಜು ಖ್ಯಾಡಿ, ಬಸವರಾಜ ಅಸ್ಕಿ, ಆನಂದ ಥೈಕಾರ ಇತರರಿದ್ದರು.