ಚಿಕ್ಕಮಗಳೂರು: ಟಿಪ್ಪು ಸುಲ್ತಾನ್ ಹಿಂದೂ, ಕ್ರಿಶ್ವಿಯನ್ ಹಾಗೂ ಕನ್ನಡದ ಕೊಲೆಗೆ ಅಡಿಗಲ್ಲು ಹಾಕಿದ್ದ. ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಕೆಆರ್‌ಎಸ್‌ಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದ ಎನ್ನುವ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇತಿಹಾಸ ಅರಿಯದವರಿಂದ ಅಪಾಯವಿರುವುದಿಲ್ಲ. ತಿರುಚುವವರಿಂದ ಅಪಾಯ ಹೆಚ್ಚು. ಕೆಲವರು ಓಟು ಸಿಗುತ್ತದೆ ಎಂದರೆ ಟಿಪ್ಪುವೇ ನಮ್ಮಪ್ಪ ಎನ್ನುತ್ತಾರೆ ಎಂದು ಕಿಡಿಕಾರಿದರು.
ಟಿಪ್ಪು ಸತ್ತಿದ್ದರಿಂದ ಕನ್ನಡ ಉಳಿಯಿತು. ಇದು ಕನ್ನಡಿಗರ ಪುಣ್ಯ. ಬ್ರಿಟೀಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದ ಎಂದರೆ ಒಪ್ಪುತ್ತೇವೆ. ಸ್ವತಂತ್ರö್ಯ ಹೋರಾಟಗಾರ ಎಂದರೆ ಅದು ಒಪ್ಪಲು ಸಾಧ್ಯವಿಲ್ಲದ ಮಾತು. ಟಿಪ್ಪು ಅಡಳಿತದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ತೆಗೆದುಹಾಕಿ ಪರ್ಷಿಯನ್ ಭಾಷೆಯನ್ನು ಹೇರಿದ್ದ. ಆತ ಅಧಿಕಾರದಲ್ಲಿ ಮುಂದುವರಿದಿದ್ದರೆ ಕನ್ನಡಕ್ಕಾಗಿ ಕೈ ಎತ್ತಿದವರ ಕೈ ಮತ್ತು ಕೊರಳನ್ನು ಕತ್ತರಿಸುವ ಕೆಲಸ ನಡೆಯುತ್ತಿತ್ತು ಎಂದು ಹೇಳಿದರು.
ಟಿಪ್ಪು ೧೭೮೨ರಲ್ಲಿ ಪಟ್ಟಕ್ಕೆ ಬಂದಿದ್ದ ೧೭೯೯ ರಲ್ಲಿ ಮರಣ ಹೊಂದಿದ್ದು, ೧೭ ವರ್ಷಗಳ ಕಾಲ ಆತ ಆಡಳಿತದಲ್ಲಿದ್ದ. ಆ ಅವಧಿಯಲ್ಲಿ ಆತ ಕನ್ನಂಬಾಡಿಯ ಸೊಲ್ಲೇ ಎತ್ತಿಲ್ಲ. ಯಾವುದಾದರೂ ದಾಖಲೆ ಇದ್ದರೆ ತೋರಿಸಲಿ. ಕನ್ನಡಂಬಾಡಿ ಅಣೆಕಟ್ಟೆಗೆ ಅಡಿಪಾಯ ಹಾಕಿದ್ದು ೧೯೧೧ ರಲ್ಲಿ ೧೯೩೨ರಲ್ಲಿ ಅದರ ಉದ್ಘಾಟನೆ ಆಗಿದ್ದು. ಅದು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಆಗಿದ್ದು. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ರಾಜ್ಯದಲ್ಲಿ ಇಡೀ ಜಗತ್ತು ಗುರುತಿಸುವ ರೀತಿ ಅಭಿವೃದ್ಧಿ ಮಾಡಿದರು ಎಂದರು.
ಸುಳ್ಳನ್ನೇ ಸತ್ಯ ಮಾಡುವ ಹುಚ್ಚು ನಾಯಿ ಕಾಂಗ್ರೆಸಿಗರಿಗೆ ಕಚ್ಚಿದೆ. ಮೊನ್ನೆ ರಾಹುಲ್ ಗಾಂಧಿ ಮಾತನಾಡುತ್ತಾ ೨೦೨೦ ರಲ್ಲಿ ಅರುಣ್ ಜೇಟ್ಲಿ ನನಗೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ. ಆದರೆ ಜೇಟ್ಲಿ ಅವರು ೨೦೧೯ರಲ್ಲೇ ತೀರಿ ಹೀಗಿದ್ದಾರೆ. ಈ ರೀತಿ ಸುಳ್ಳು ಹೇಳುವವರು ನಾಳೆ ಬೆಳಗ್ಗೆ ನಾಡ ಗೀತೆಯನ್ನು ಹೈದರಾಲಿ ಬರೆದ ಎಂದರೂ ಆಶ್ಚರ್ಯವಿಲ್ಲ. ಸ್ವಾತಂತ್ರö್ಯ ತಂದು ಕೊಟ್ಟಿz್ದೆÃ ಔರಂಗಜೇಬ ಎಂದರೂ ಆಶ್ಚರ್ಯವಿಲ್ಲ. ಕಾಂಗ್ರೆಸಿಗರ ಹಸಿ ಸುಳ್ಳುಗಳನ್ನು ಕೇಳಿ ಜನರು ಅಪಹಾಸ್ಯ ಮಾಡುತ್ತಿದ್ದಾರೆ ಎಂದರು.
ಟಿಪ್ಪು ಅಡಿಗಲ್ಲು ಹಾಕಿದ ಎನ್ನಲು ಚಾರಿತ್ರಿಕ ದಾಖಲೆಗಳನ್ನು ಹಾಜರುಪಡಿಸಿದರೆ ಸಚಿವರನ್ನು ನಾವು ಮೈಸೂರಿನಲ್ಲಿ ಅಭಿನಂದಿಸುತ್ತೇವೆ. ಇಲ್ಲವಾದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ಸವಾಲು ಹಾಕಿದರು. ಟಿಪ್ಪುವಿನ ಖಡ್ಗದಲ್ಲಿ ಕಾಫೀರರ ರಕ್ತಕ್ಕಾಗಿ ನನ್ನ ಖಡ್ಗ ತಹತಹಿಸುತ್ತಿದೆ ಎಂದಿತ್ತು. ಹಾಗಾದರೆ ಕಾಫೀರರು ಯಾರು? ಬರೇ ಸಿ.ಟಿ.ರವಿ ಅಷ್ಟೇ ಅಲ್ಲ, ಮಹದೇವಪ್ಪ, ಪರಮೇಶ್ವರ್, ಸಿದ್ದರಾಮಯ್ಯ, ರಾಹುಲ್ ಗಾಂಧಿ ಎಲ್ಲರೂ ಕಾಫಿರರೇ, ಟಿಪ್ಪುವಿನ ಖಡ್ಗ ಇವರೆಲ್ಲರ ರಕ್ತಕ್ಕಾಗಿ ತಹತಹಿಸುತ್ತಿತ್ತು. ಇದು ಸತ್ಯ ಇದನ್ನು ಹೇಳುವ ಧೈರ್ಯ ಕಾಂಗ್ರೆಸಿಗರಿಗಿಲ್ಲ ಎಂದು ಟೀಕಿಸಿದರು.
ಪಾರದರ್ಶಕ ತನಿಖೆ ನಡೆಯಲಿ
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವ ಪ್ರಕರಣಕ್ಕೆ ಸಂಬAಧಪಟ್ಟAತೆ ನಮ್ಮ ಆಕ್ಷೇಪ ಇರುವುದು ಧರ್ಮಸ್ಥಳದ ವಿರುದ್ಧ ಚ್ಯುತಿ ತರುವ ಷಡ್ಯಂತ್ರದ ವಿರುದ್ಧ. ತನಿಖೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನಡೆಯಲಿ. ನಾವು ಯಾರು ಅಡ್ಡಗಾಲು ಹಾಕುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿಗೆ ಮಸಿ ಬಳಿಯುವ ಷಡ್ಯಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಜನರೇ ಸಿಡಿದೇಳುತ್ತಾರೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ಆಗಲಿ. ತನಿಖಾ ಹಂತದಲ್ಲಿ ನಾನು ಏನು ಮಾತನಾಡುವುದಿಲ್ಲ. ಆದರೆ ಷಡ್ಯಂತ್ರ ಮಾಡುತ್ತಿರುವವರು ಬಾಲ ಬಿಚ್ಚಿದರೆ ಸಮಾಜವೇ ಉತ್ತರ ಕೊಡುತ್ತದೆ. ಸಜ್ಜನರು ಸುಮ್ಮನಿದ್ದಾರೆ ಎಂದು ದುರ್ಜನರು ಮೆರೆಯಬಹುದು ಎಂದುಕೊAಡರೆ ಅದು ಒಳ್ಳೆಯದಲ್ಲ ಎಂದರು.
ರಾಹುಲ್ ಬಳಿ ಯಾವ ಬಾಂಬ್ ಇದೆ ನೋಡೋಣ
ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬಳಿ ಆಟಂಬಾAಬ್ ಇದೆಯೋ, ಟುಸ್ ಬಾಂಬ್ ಇದೆಯೋ ಅಥವಾ ತಿಂದಿದ್ದು ಹೆಚ್ಚಾಗಿ ಬರೋ ಗ್ಯಾಸ್ ಬಾಂಬ್ ಇದೆಯೋ ಗೊತ್ತಾಗುತ್ತದೆ ಎಂದು ಸಿ.ಟಿ.ರವಿ ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ಅದೇ ವೋಟರ್ ಲಿಸ್ಟ್ ಹಿಡಿದುಕೊಂಡು ೧೩೬ ಸೀಟು ಗೆದ್ದಿದ್ದಾರೆ. ಆ ಪಟ್ಟಿಯೇ ಸರಿ ಇಲ್ಲ ಎಂದರೆ ೧೩೬ ಜನರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಲ್ಲವೇ? ಚುನಾವಣಾ ಅಕ್ರಮ ನಡೆದಿದೆ ಎನ್ನುವುದಾದರೆ ಕಾಂಗ್ರೆಸ್ಸಿಗರು ೧೩೬ ಜನ ಗೆದ್ದರಲ್ಲವೇ ಅದು ಹೇಗೆ ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಗೆದ್ದಿದ್ದಾರೆ. ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದ್ದು ನಾವು. ಕೆರೆ ತುಂಬಿಸಿದ್ದು ನಾವು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದು ನಾವು. ಆದರೆ ಗೆದ್ದಿದ್ದು ಅವರು. ಇದು ಹೇಗೆ? ಇಲ್ಲಿ ಚುನಾವಣಾ ಅಕ್ರಮ ನಡೆಸಿ ಗೆದ್ದಿರುವ ಬಗ್ಗೆ ಅನುಮಾನವಿದೆ. ಇದೀಗ ರಾಹಲ್ ಗಾಂಧಿ ಆಟಂ ಬಾಂಬ್ ಎನ್ನುತ್ತಿದ್ದಾರೆ. ಇದರಿಂದ ಇಡೀ ಕಾಂಗ್ರೆಸ್ ಸರ್ವನಾಶವಾಗುತ್ತದೆಯೋ ಎಂದು ನಾವು ಕಾಯುತ್ತಿz್ದÉÃವೆ ಎಂದರು.
ಗುರುವಿಗೆ ತಿರುಮಂತ್ರ
ಇAದು ಶಾಸಕರಾಗಿರುವವರು ೧೫ ವರ್ಷ ಸಿ.ಟಿ.ರವಿಗೆ ಜೈ ಎಂದಿದ್ದರು. ಭಾರತ್ ಮಾತಾ ಕಿ ಜೈ, ಬಿಜೆಪಿ ಜೈ, ಸಿ.ಟಿ.ರವಿ ಜೈ ಎನ್ನುತ್ತಿದ್ದರು. ಇಂಥವರು ನನಗೆ ಪಾಠ ಹೇಳುವುದು ಬೇಡ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಹಿಂದಿನ ಫೋಟೋಗಳನ್ನು ತೆಗೆದು ನೋಡಿ. ಶೇ. ೫೦ರಷ್ಟು ಫೋಟೋಗಳಲ್ಲಿ ಇಂದಿನ ಶಾಸಕರ ಫೋಟೊಗಳು ಇವೆ. ಟೀಕೆ ಮಾಡುವಾಗ ನಾವು ಯಾರನ್ನು ಟೀಕೆ ಮಾಡುತ್ತೇವೆ ಎಂಬ ಎಚ್ಚರಿಕೆಯೂ ಇರಬೇಕು ಎಂದರು.
ಗುರುವಿಗೆ ತಿರುಮಂತ್ರ ಹಾಕಲು ಬಂದರೆ ಗುರು ಇನ್ನೂ ಮೂರ್ನಾಲ್ಕು ವಿದ್ಯೆ ಇಟ್ಟುಕೊಂಡಿರುತ್ತಾನೆ. ಕಾಲ ಬಂದಾಗ ಆ ವಿದ್ಯೆಗಳನ್ನು ಉಪಯೋಗ ಮಾಡಿಕೊಳ್ಳುತ್ತಾನೆ. ಗುರುವಿಗೆ ತಿರುಮಂತ್ರ ಹಾಕುವುದು ಬೇಡ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೆಸರನ್ನು ಹೇಳದೆ ಸಿ.ಟಿ.ರವಿ ಎಚ್ಚರಿಕೆ ನೀಡಿದರು.