ಜಿಲ್ಲೆ

ಟಿಪ್ಪರ್ ಹರಿದು 3 ಕುರಿಗಳು ಸಾವು

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಕುಂತೂರುಮೊಳೆ ಗ್ರಾಮದ ಹೆದ್ದಾರಿ ರಸ್ತೆಯಲ್ಲಿ ಟಿಪ್ಪರ್ ಹರಿದು 3 ಕುರಿಗಳು ಮೃತಪಟ್ಟಿವೆ.
ಗ್ರಾಮದ ನಾರಾಯಣ ಸ್ವಾಮಿ ಎಂಬುವರ 3 ಕುರಿಗಳು ಟಿಪ್ಪರ್‌ಗೆ ಸಿಲುಕಿ ಮೃತಪಟ್ಟಿವೆ. ಗುರುವಾರ ಸಂಜೆ ಸುಮಾರು 4.30ರಲ್ಲಿ ರಸ್ತೆದಾಡುತ್ತಿದ್ದ ಕುರಿಗಳ ಮೇಲೆ ಟಿಪ್ಪರ್ ಹರಿದಿದ್ದು, ಸ್ಥಳದಲ್ಲೆ ಮೂರು ಕುರಿಗಳು ಮೃತಪಟ್ಟಿವೆ. ಜನರು ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.