filter: 0; fileterIntensity: 0.0; filterMask: 0; captureOrientation: null; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: 0;weatherinfo: null;temperature: 34; 
ಜಿಲ್ಲೆ

ಟಿಎಪಿಸಿಎಂಎಸ್‌ನಿಂದ ರೈತರ ಏಳಿಗೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ರೈತರ ಶ್ರೇಯೋಭಿವೃದ್ಧಿಗೆ ಸಂಘ ನಿರಂತರವಾಗಿ ಶ್ರಮಿಸುತ್ತಿದ್ದು, ರೈತರೂ ಹೆಚ್ಚಿನ ಸಹಕಾರ ನೀಡಬೇಕಿದೆ ಎಂದು ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ ತಿಳಿಸಿದರು.
ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 75ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘದಲ್ಲಿ 3800ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು, ರೈತರ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸಹಕಾರಿ ಬ್ಯಾಂಕ್ ಸಹಕಾರಿಯಾಗಿದೆ. ಸದಸ್ಯರು ಖಾಸಗಿ ಮಳಿಗೆಯಲ್ಲಿ ಗೊಬ್ಬರ, ದಿನಸಿ ತಗೆದುಕೊಳ್ಳುವ ಬದಲು ಸಂಘದಲ್ಲಿ ಇತ್ತೀಚೆಗೆ ಉತ್ತೀಕರಣಗೊಳಿಸಿ ನಿರ್ಮಿಸಿದ್ದ ಸೂಪರ್ ಮಾರ್ಕೆಟ್‌ನಲ್ಲಿ ಖರೀದಿಸಬೇಕು ಎಂದರು.
ಸಂಘದ ಭೂದಾಖಲೆ ಸಿದ್ಧತೆ: ಸಂಘ 1949ರಲ್ಲಿ ಸ್ಥಾಪನೆಗೊಂಡಿದ್ದು, ನೆಲಮಂಗಲ ಸರ್ವೇ.ನಂ 207ರಲ್ಲಿ 1960ರಲ್ಲಿ ಸರ್ಕಾರದಿಂದ 2 ಎಕರೆ 28ಗುಂಟೆ ಜಮೀನು ಸಂಘಕ್ಕೆ ಮಂಜೂರಾಗಿತ್ತು. ಬಳಿಕ 1982ರಲ್ಲಿ 30ಮತ್ತು 25 ಅಡಿಯ ನಿವೇಶನಕ್ಕೆ ಪುರಸಭೆಯಿಂದ ಖಾತೆ ಮಾಡಲಾಗಿತ್ತು. ನಂತರ ಜಮೀನಿನ ದಾಖಲೆಗಳು ದೇವಾಲಯವೊಂದರ ಹೆಸರಿಗೆ ಬರುತ್ತಿದ್ದು. ಬಳಿಕ ಮಂಜೂರಾದ ಜಮೀನಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿ ವಿವಿಧ ಕಚೇರಿಗೆ ಮನವಿ ಸಲ್ಲಿಸಿ ಸುಮಾರು 17.5ಲಕ್ಷ ರೂಪಾಯಿ ಕಂದಾಯ ಪಾವತಿ ಮಾಡಿ ನಗರಸಭೆ ಖಾತೆ ಮಾಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 20ಕ್ಕೂ ಹೆಚ್ಚು ಮಂದಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿರ್ದೇಶಕರಾದ ಎ.ಪಿಳ್ಳಪ್ಪ, ಜಿ.ಸಂಪತ್, ವೀರಮಾರೇಗೌಡ, ಡಿ.ಜೆ.ಜಗಜ್ಯೋತಿಬಸವೇಶ್ವರ, ಬಿ.ಎಚ್.ಶಿವರಾಮಯ್ಯ, ಪಟ್ಟಾಭಿರಾಮಯ್ಯ, ಕೆ.ಆರ್.ಗುರುಪ್ರಕಾಶ್, ಎಚ್.ನಾಗಭೂಷಣ್, ಜಿ.ಮಂಜುಳ ಎಚ್.ಎಂ.ಸಿಂಧೂ, ಕಾರ್ಯದರ್ಶಿ ಎಂ.ಎಚ್.ರಮೇಶ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಪಟೇಲ್‌ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಲವರಾಜು, ತಾಪಂ ಮಾಜಿ ಸದಸ್ಯ ಶಿವಣ್ಣ ಮುಖಂಡ ಭವಾನಿಶಂಕರ್‌ಬೈರೇಗೌಡ, ಸಿದ್ಧಬೈರಯ್ಯ, ಎಚ್.ಜಿರಾಜು ವಕೀಲ ಅನ್ನದಾನಯ್ಯ, ಸುರೇಶ್, ಶ್ರೀನಿವಾಸ್, ಪುಟ್ಟಾಂಜನೇಯ, ರಾಜಶೇಖರ್ ಉಪಸ್ಥಿತರಿದರು.

ಚರ್ಚೆಯಾದ ವಿಷಯಗಳು: ನಗರದ ಟಿಎಪಿಸಿಎಂಎಸ್‌ಗೆ ನಿತ್ಯವೂ ನೂರಾರು ಮಂದಿ ರೈತರು ವಿವಿಧ ಕಾರಣಕ್ಕೆ ಬೇಟಿ ನೀಡಿದ್ದು ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ, ಸರ್ವಸದಸ್ಯರ ಮಹಾಸಭೆ ಕುರಿತು ಆಹ್ವಾನವನ್ನು ನೀಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಕೆಲ ರೈತರಿಗೆ ಸರಿಯಾದ ಸಮಸ್ಯೆಕ್ಕೆ ಆಹ್ವಾನ ಪತ್ರಿಕೆ ತಲುಪುತ್ತಿಲ್ಲ ಎಂದು ರೈತರು ಆರೋಪಿಸಿದರು. ಮರಣ ಹೊಂದಿದ್ದ ಸದಸ್ಯರಿಗೆ 20ಸಾವಿರ ಸಹಾಯಧನ ನೀಡಬೇಕು. ಸದಸ್ಯರ ಕಲ್ಯಾಣನಿಧಿ ಸ್ಥಾಪನೆ ಮಾಡಬೇಕು. ಜತೆಗೆ ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ರೈತರ ಮನೆಗೆ ಬರುವ ನಿರ್ದೇಶಕರು ಪ್ರತಿಯೊಬ್ಬರ ಮನೆಗೆ ಬೇಟಿ ಮಹಾಸಭಾ ನೋಟಿಸ್ ವಿತರಣೆ ಮಾಡುವ ಕಾರ್ಯ ಮಾಡಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.

ಷೇರುದಾರರಿಗೆ ಡಿವಿಡೆಂಡ್ ವಿತರಣೆ: ಸೂಲಿಬೆಲೆ: ಇಲ್ಲಿನ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಸದಸ್ಯರಿಗೆ ಬ್ಯಾಂಕಿನ ಲಾಭಾಂಶದಲ್ಲಿ ಪ್ರಸಕ್ತ ಸಾಲಿನಲ್ಲಿ ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ವಿ.ಸತೀಶಗೌಡ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ 1 ಕೋಟಿ ರೂ. ಆದಾಯ ಬಂದಿದ್ದು, ಸೆ.25 ರಂದು ಸಮುದಾಯ ಭವನದಲ್ಲಿ ನಡೆಯಲಿರುವ ಸರ್ವಸದಸ್ಯರ ಮಹಾ ಸಭೆಯಲ್ಲಿ 2700 ಷೇರುದಾರರಿಗೆ ಡಿವಿಡೆಂಟ್ ಹಣದಲ್ಲಿ ಉಡುಗೊರೆ ನೀಡಲಾಗುವುದು.


ನಾಳೆ ಸಭಾಭವನ ಉದ್ಘಾಟನೆ: ಇಲ್ಲಿನ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ನಿರ್ಮಾಣವಾಗಿರುವ ಬಚ್ಚೇಗೌಡರ ಸಭಾ ಭವನವನ್ನು ಸೆ.25 ರಂದು ಬೆಳಗ್ಗೆ 10ಕ್ಕೆ ಉದ್ಘಾಟಿಸಲಾಗುವುದು ಎಂದು ಸಿಇಒ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್, ಸಂಘದ ಅಧ್ಯಕ್ಷ ಬಿ.ವಿ.ಸತೀಶಗೌಡ, ಶಾಸಕ ಶರತ್‌ಬಚ್ಚೇಗೌಡ, ಮಾಜಿ ಅಧ್ಯಕ್ಷ ಬಿ.ಎನ್.ಗೋಪಾಲಗೌಡ, ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ ಪಾಲ್ಗೊಳ್ಳಲಿದ್ದಾರೆ.