ಜಿಲ್ಲೆ

ಜ್ಯೋತಿಷ್ಯ ಸಮ್ಮೇಳನ 16ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ, ಪಂಚಾಂಗ ಸಮಿತಿ ಹಾಗೂ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟ ವತಿಯಿಂದ ಜು. 16ರಂದು ಬೆಳಗ್ಗೆ 9 ಗಂಟೆಯಿಂದ ಇಲ್ಲಿನ ಗಾಂಧಿಚೌಕ್‌ನ ಶಂಕರಾಚಾರ್ಯ ಸಂಸ್ಕೃತ ಪಾಠ ಶಾಲೆಯಲ್ಲಿ ಜ್ಯೋತಿಷ್ಯ ಸಮ್ಮೇಳ ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ಪಾಠಶಾಲೆ ಮುಖ್ಯಾಧ್ಯಾಪಕ ನ್ಯಾಯಚುಡಾಮಣಿ ರಾಜೇಶ್ವರಿ ಶಾಸ್ತ್ರಿಗಳು ಸಮ್ಮೇಳನ ಉದ್ಘಾಟಿಸುವರು. ಅತಿಥಿಗಳಾಗಿ ಬಿ.ಬಿ. ಸ್ವಾಮಿ, ಸಿ.ಆರ್. ಜೋಶಿ, ನಾಗೇಶ ಶಾಸ್ತ್ರಿಗಳು, ಸುರೇಶ ಕೊಪ್ಪರ, ಬಸವರಾಜ ಕುರುಬೆಟ್, ರಂಗನಾಥ ಜೋಶಿ, ರಾಜು ಪಾಟೀಲ ಕುಲಕರ್ಣಿ ಆಗಮಿಸುವರು. ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಶ್ರೀಕಾಂತ ಮಂಗಸೂಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ಬೆಳಗ್ಗೆ 11.15ಕ್ಕೆ ಗ್ರಹಗಳ ಅವಸ್ಥಾ ಮತ್ತು ಫಲ, ಆರೂಢ ಪ್ರಶ್ನ ಪದ್ಧತಿ, ಪಂಚಾಂಗ ಹಾಗೂ ವೈದ್ಯನಾಥ ವಿರಚಿತ ಜಾತಕ ಪಾರಿಜಾತ ವಿಷಯ ಕುರಿತು ಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 2.15ಕ್ಕೆ ಈಶಾನ್ಯದ ಫಲಾಫಲಗಳು, ಜ್ಯೋತಿಷ್ಯ ಶಾಸ್ತ್ರ ಮತ್ತು ವೈಜ್ಞಾನಿಕ ಚಿಂತನೆ, ದ್ವಾದಶ ಭಾವಗಳ ಮಹತ್ವ ಹಾಗೂ ವೈವಾಹಿಕ ಜೀವನ ವಿಷಯ ಕುರಿತು ನಡೆಯುವ ಗೋಷ್ಠಿಯಲ್ಲಿ ಪಂಡಿತರು ಭಾಗವಹಿಸಲಿದ್ದಾರೆ.
ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಧುಸೂಧನಶಾಸ್ತ್ರಿ ಹಂಪಿಹೊಳಿ ಅತಿಥಿಯಾಗಿ ಪಾಲ್ಗೊಳ್ಳುವರು. ನಾಗೇಶ ಶಾಸ್ತ್ರಿಗಳು ಉಪಸ್ಥಿತರಿರುವರು. ಶ್ರೀಕಾಂತ ಮಂಗಸೂಳಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.