ಜಿಲ್ಲೆ

ಜ್ಯೋತಿ ಮಹೇಶ್ ಅಧ್ಯಕ್ಷೆ, ನಾಗೇಶ್ ಉಪಾಧ್ಯಕ್ಷ

ಮೇಲುಕೋಟೆ: ಸಮೀಪದ ಬಳಘಟ್ಟ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್-ರೈತಸಂಘ ಬೆಂಬಲಿತ ಅಭ್ಯರ್ಥಿ ಜ್ಯೋತಿ ಮಹೇಶ್ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ನಾಗೇಶ್ ಆಯ್ಕೆಯಾದರು.


10 ಸದಸ್ಯರ ಬಲ ಇರುವ ಬಳಘಟ್ಟ ಗ್ರಾಪಂನ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣಾ ಪ್ರಕ್ರಿಯೆ ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ರೈತ ಸಂಘದ ಬೆಂಬಲಿತೆ ಜ್ಯೋತಿ ಮಹೇಶ್ ಹೊರತು ಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಎಂ.ಕೆ.ನಾಗೇಶ್ ಹಾಗೂ ರೈತ ಸಂಘ-ಕಾಂಗ್ರೆಸ್ ಬೆಂಬಲಿತ ಎಂ.ಅಣ್ಣಯ್ಯ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಿತು.


ಎಂ.ಕೆ.ನಾಗೇಶ್ 8 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಎಂ.ಅಣ್ಣಯ್ಯ-2 ಮತ ಪಡೆದು ಪರಾಭಗೊಂಡರು. ಚುನಾವಣಾಧಿಕಾರಿ ಆಗಿ ತಾ.ಪಂ. ಇಒ ಲೋಕೇಶ್‌ಮೂರ್ತಿ ಕಾರ್ಯ ನಿರ್ವಹಿಸಿದರು.


ಗ್ರಾಪಂನ ನೂತನ ಅಧ್ಯಕ್ಷೆ ಜ್ಯೋತಿ ಮಹೇಶ್ ಹಾಗೂ ಉಪಾಧ್ಯಕ್ಷ ಎಂ.ಕೆ.ನಾಗೇಶ್ ಅವರನ್ನು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಉದ್ಯಮಿ ಪರಮೇಶ್‌ಗೌಡ ಸೇರಿದಂತೆ ಮುಖಂಡರು ಅಭಿನಂದಿಸಿದರು.

ಗ್ರಾಪಂ ಸದಸ್ಯರಾದ ಪವಿತ್ರಾ, ಜಯರಾಮು, ವೆಂಕಟೇಶ್, ಸೋಮಾಚಾರಿ, ಆಶಾ, ಚಂದ್ರಮ್ಮ, ಸುಶೀಲಮ್ಮ, ಕಸಾಪ ಮಾಜಿ ಅಧ್ಯಕ್ಷ ವೆಂಕಟರಾಮೇಗೌಡ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಯೋಗೇಗೌಡ, ಮಹೇಶ್, ಜಯಬೋರೇಗೌಡ, ಲೋಕೇಶ್, ವಿಜಿಕುಮಾರ್, ಚಂದ್ರು, ಪಿಡಿಒ ರಾಜೇಂದ್ರ, ಕಾರ್ಯದರ್ಶಿ ಪಾಪೇಗೌಡ, ಸಹಾಯಕ ಚುನಾವಣಾಧಿಕಾರಿ ನೀಲಮೇಘಶ್ಯಾಮ ಇತರರು ಇದ್ದರು.