ನಿಪ್ಪಾಣಿ ನಗರದಲ್ಲಿ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ಪ್ರಾಣಲಿಂಗ ಸ್ವಾಮೀಜಿ, ಮಹಾದೇವಿ ನಾಯಿಕ, ಜಯವಂತ ಭಾಟಲೆ, ಮುಜ-ರ್​ ಬಳಿಗಾರ ಇತರರಿದ್ದರು. 
ಜಿಲ್ಲೆ

ಜ್ಞಾನಾರ್ಜನೆ ಮಾಡುತ್ತಲೇ ಇರಬೇಕು

ನಿಪ್ಪಾಣಿ: ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕರಿಗಿದ್ದು, ಸಮಯ ನಿರ್ವಹಣಾ ಕಲೆ ಅರಿತುಕೊಂಡು ಜ್ಞಾನಾರ್ಜನೆ ಮಾಡಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ರಾಜಾ ಶಿವ ಛತ್ರಪತಿ ಸಾಂಸತಿಕ ಭವನದಲ್ಲಿ ಜಿಪಂ, ಶಿಣ ಇಲಾಖೆ, ಹಾಗೂ ತಾಪಂ ಸಂಯುಕ್ತಾಶ್ರಯದಲ್ಲಿ
ಮಂಗಳವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್​ ಜನ್ಮದಿನಾಚರಣೆ, ಶಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಶಿಣದ ಗುಣಮಟ್ಟ ಹೆಚ್ಚಿಸಬೇಕು. ಡಾ. ಸರ್ವಪಲ್ಲಿ ರಾಧಾಕೃಷ್ಣನ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.

ಬಿಇಒ ಮಹಾದೇವಿ ನಾಯಿಕ ಮಾತನಾಡಿ, ನಿತ್ಯ ಜೀವನದಲ್ಲಿ ಗುರುಗಳನ್ನು ಸ್ಮರಿಸುತ್ತಿರಬೇಕು ಎಂದರು. ವಿರೂಪಾಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿದರು. ಆದರ್ಶ ಶಿಕ ಪುರಸತ ಎಸ್​.ಡಿ. ಕುಂಬಾರ, ಸುನೀತಾ ಕೋಗಲೆ, ಟಿ.ಬಿ.ಲೋಕರೆ, ಮಹಾದೇವ ಕೊರವ ಸೇರಿ ನಿವೃತ್ತ ಶಿಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್​ ಮುಜ್ಫರ್​ ಬಳಿಗಾರ, ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಜಯವಂತ ಭಾಟಲೆ, ನೀತಾ ಬಾಗಡೆ, ರಾಜೇಂದ್ರ ಗುಂದೇಶಾ, ಆರ್​.ಎ. ಕಾಗೆ, ರಾವಸಾಹೇಬ ಜನವಾಡೆ, ಮಹಾದೇವ ಗೋಕಾರ, ಭಾಸ್ಕರ ಸ್ವಾಮಿ ಇತರರಿದ್ದರು.