ಬಾಗಲಕೋಟೆ: : ಜ್ಞಾನ ಸಂಪತ್ತಿನಲ್ಲಿ ಭಾರತ ವಿಶ್ವಗುರುವಾಗಿದ್ದು, ಭಾರತೀಯ ಜ್ಞಾನ ಪರಂಪರೆಯನ್ನು ಇಂದಿನ ಜ್ಞಾನ ಪರಂಪರೆಯ ಜೊತೆಗೆ ಸಮನ್ವಯಗೊಳಿಸಿ, ನಮ್ಮ ಸಮಸ್ಸೆ, ಸವಾಲುಗಳು ಮತ್ತು ಜ್ಞಾನಶಾಖೆಗಳಿಗೆ ಹೊಸ ಬೆಳಕನ್ನು ನೀಡಬೇಕಾದ ಅಗತ್ಯತೆ ಇದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.
ಅವರು ನಗರದ ಬಿ.ವ್ಹಿ.ವ್ಹಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಶೋಧನಾ ಅಭಿವೃದ್ಧಿ ಘಟಕ ಮತ್ತು ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶನಿವಾರ ಸಂಘದ ನೂತನ ಸಭಾಭವನದಲ್ಲಿ ನಡೆದ ಬಹುಶಿಸ್ತೀಯ ಸಂಶೋಧನೆಯಲ್ಲಿ ಭಾರತೀಯ ಜ್ಞಾನ ಸಂಪತ್ತು ಕುರಿತು ಒಂದು ದಿನದ ರಾಷ್ಟೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮ್ಮೇಳನ ಬಹಳ ಸಕಾಲಿಕ ಉಪಯುಕ್ತವಾದ ಸಮ್ಮೇಳನವಾಗಿದ್ದು, 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾರಂಭವಾದಾಗಿಂದ ಈ ಭಾರತೀಯ ಜ್ಞಾನ ಪರಂಪರೆಯ ಪುನರ್ ನಿರೂಪಣೆ ಇದರ ಪುನರ್ ಮಾನನ ಬಗ್ಗೆ ಸಾಕಷ್ಟು ಪ್ರಯತ್ನಗಳು ಹಾಗೂ ಸರಕಾರದ ಹಾಗೂ ಸಂಘ ಸಂಸ್ಥೆಗಳ ಮಟ್ಟದಲ್ಲಿ ಬೇರೇ ಶೈಕ್ಷಣಿಕ ವೇದಿಕೆಗಳಲ್ಲಿ ಇದು ಸಾಕಷ್ಟು ಚರ್ಚೆ ನಡಿತಾ ಇದೆ, ಈ ಚರ್ಚೆಯ ಮೂಲ ಉದ್ದೇಶ ಭಾರತೀಯ ಜ್ಞಾನ ಪರಂಪರೆಯನ್ನು ಇವತ್ತಿನ ಜ್ಞಾನ ಪರಂಪರಗೆ ಹೇಗೆ ಸಮನ್ವಯಮಾಡಿ ನಮ್ಮ ಸಮಸ್ಯೆಗಳಿಗೆ ನಮ್ಮ ಸವಾಲುಗಳಿಗೆ ನಮ್ಮ ಬೇರೆ ಬೇರೆ ಜ್ಞಾನ ಶಾಖೆಗಳಿಗೆ ಹೋಸ ಆಯಾಮ ಹೊಸ ಬೇಳಕು ಕೋಡುವ ಸಾಧ್ಯತೆಗಳನ್ನು ಪರಿಶೀಲನೆ ಮಾಡುವುದಾಗಿದೆ.
ಈ ನಿಟ್ಟಿನಲ್ಲಿ ಈ ಇವತ್ತಿ ಈ ರಾಷ್ಟ್ರೀಯ ಸಮ್ಮೇಳನ ಒಂದು ಅಭಿನಂದನ ಪ್ರಯತ್ನವಾಗಿದ್ದು ಸಂಘಟನೆ ಮಾಡಿದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯಕ್ಕೆ ಶುಭಾಶಯಗಳನ್ನು ತಿಳಿಸಿದರಲ್ಲದೆ, ಸಂಸ್ಕೃತಿ ಹಾಗೂ ಸಂಪ್ರದಾಯದಿಂದ ಕೂಡಿದ ಭಾರತೀಯ ಶಿಕ್ಷಣ ಶ್ರೀಮಂತವಾಗಿದ್ದು, ಜ್ಞಾನ - ವಿಜ್ಞಾನದ ಮುಖಾಮುಖಿಯ ದರ್ಶನ ಹಾಗೂ ತತ್ವಶಾಸ್ತ್ರ ಮತ್ತು ನೈತಿಕತೆಯ ಮೇಲೆ ರೂಪುಗೊಂಡಿರುವುದೆ ಭಾರತೀಯ ಶಿಕ್ಷಣವಾಗಿದೆ, ಭಾರತದ ಶಿಕ್ಷಣವು ಪ್ರಾಯೋಗಿಕ ಶಿಕ್ಷಣವಾಗಿದ್ದು, ಮಹಿಳೆ ಇಲ್ಲದೆ ಭಾರತೀಯ ಶಿಕ್ಷಣ ಪರಿಪೂರ್ಣವಾಗಿಲ್ಲ, ಪ್ರಾಚೀನ ಕಾಲದಿಂದಲೂ ಅನೇಕ ವಿಶ್ವವಿದ್ಯಾಲಯಗಳು 64 ವಿದ್ಯೆಗಳನ್ನು ಜಗತ್ತಿಗೆ ಪರಿಚಯಿಸಿ ಅಂದಿನಿಂದ ಇಂದಿನವರೆಗೂ ವಿಶ್ವಗುರು, ವಿಶ್ವ ನಾಯಕ ಸ್ಥಾನವನ್ನು ಜ್ಞಾನಸಂಪತ್ತಿನಲ್ಲಿ ಭಾರತವು ಪಡೆದುಕೊಂಡಿದೆ, ಇಲ್ಲಿನ ಜ್ಞಾನ ಪದ್ಧತಿ ಕಲ್ಪನೆಗೂ ಮೀರಿದ್ದು, ಖಗೋಳ ಶಾಸ್ತ್ರದಿಂದ ಹಿಡಿದು ಇಂದಿನ ಕಾನೂನು ಶಾಸ್ತ್ರದವರೆಗೂ ಅಪಾರಜ್ಞಾನವನ್ನು ಭಾರತೀಯರು ಹೊಂದಿದ್ದಾರೆ ಎಂದರು.
ಪ್ರಸ್ತಾವಿಕ ಮಾತನಾಡಿದ ಭಾರತದ ಪ್ರಮುಖ ಎಂ.ಎನ್.ಸಿ.ಯ ಮುಖ್ಯ ಕಾರ್ಯತಂತ್ರ ಅಧಿಕಾರಿಗಳಾದ ಸುಬ್ರಹ್ಮಣ್ಯಂ ಚಿದಂಬರಂ ಭಾರತದ ಶಿಕ್ಷಣವು ಅಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡಿ ನಮ್ಮ ನಂಬಿಕೆ, ಆಚಾರ,ವಿಚಾರ ಸಂಸ್ಕೃತಿ ಹಾಗೂ ನೈತಿಕ ನಿಯಮಗಳನ್ನು ಜೀವಂತವಾಗಿ ಉಳಿಸಿವೆ, 500 ವರ್ಷದ ಹಿಂದಿನ ರೀತಿ- ನೀತಿಗಳು ಬೇರೆಯಾಗಿದ್ದು, ಇಂದು ನಾವು ವಾಸ್ತವಿಕವಾಗಿ ಇರುವ ಸಮಾಜವು ಬಹಳಷ್ಟು ಬದಲಾವಣೆ ಹೊಂದಿದೆ. ಇಂದು ಶಿಕ್ಷಣವು ಕೇವಲ ಶೈಕ್ಷಣಿಕ ಹಂತಕ್ಕೆ ಮಾತ್ರ ಸೀಮಿತವಾಗದೆ ಬದುಕು ರೂಪಿಸಿಕೊಳ್ಳಲು ಆಸರೆಯಾಗಬೇಕೆಂದರು.
ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ ಅವರು ಮಾತನಾಡಿ ಇಂದಿನ ಆಧುನಿಕತೆಯ ತಂತ್ರಜ್ಞಾನದ ಯುಗದಲ್ಲಿ ಹೆಚ್ಚಿನ ಸಾಧನೆಗಾಗಿ ವಿದ್ಯಾರ್ಥಿಗಳು ತಮ್ಮ ಕ್ರೀಯಾಶೀಲರಾಗಿ ತಮ್ಮ ಕೌಶಲ್ಯಗಳ ಮೂಲಕ ಉದ್ಯೋಗವಂತರಾಗಬೇಕು ಎಂದರು.
ಉನ್ನತ ಶಿಕ್ಷಣದ ಮುಖ್ಯ ಸಲಹೆಗಾರರಾದ ಡಾ.ಮೀನಾ ಚಂದಾವರಕರ್, ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ,ಸದಸ್ಯರಾದ ಎಸ್.ಆರ್.ಮನಹಳ್ಳಿ, ಐಕ್ಯೂಎಸಿ ಸಂಯೋಜಕರಾದ ಪಿ.ಕೆ. ಚೌಗುಲಾ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಅವಿತಾ ಮಾರಿಹಾಳ ಉಪಸ್ಥಿತರಿದ್ದರು.