ಜಿಲ್ಲೆ

ಜ್ಞಾನರತ್ನ ಪ್ರಶಸ್ತಿ ಪ್ರದಾನ

ಚಿತ್ರದುರ್ಗ:ನಗರದ ರೋಟರಿಕ್ಲಬ್,ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿಯಿಂದ ಬ್ರಹ್ಮ ಕುಮಾರಿ ರಾಜಯೋಗಿನಿ ಜಯಂತಿ ಅವರಿಗೆ ಮಂಗಳವಾರ ಜ್ಞಾನರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕೆಳಗೋಟೆ ಪ್ರಜಾ ಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ,ಜಯಂತಿ ಅವರ ಸೇವಾ ಕಾರ‌್ಯಗಳನ್ನು ಶ್ಲಾಘಿಸ ಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜ್,ಕಾರ‌್ಯದರ್ಶಿ ವಿಕ್ರಾಂತ್‌ಜೈನ್,ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಎಂ.ಗೀರೀಶ್,ಕಾ ರ‌್ಯದರ್ಶಿಶಶಿಧರ ಗುಪ್ತ,ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಶಂಕರಪ್ಪ,ಕಾರ‌್ಯದರ್ಶಿ ಲಕ್ಷ್ಮ್ಮೀಕಾಂತ್,ಎಸ್.ವೀರೇಶ್,ಜಯಶ್ರೀಷಾ,ಕುರು ಬಾರಹಳ್ಳಿ ಶಿವಣ್ಣ,ಎಚ್.ಕೆ.ಎಸ್.ಸ್ವಾಮಿ,ಗಿರೀಶ್,ಮೋಹನ್‌ಕುಮಾರ್,ರಾಘವೇಂದ್ರ,ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ,ಕನ್ನಕಾ,ದೇವಿಕಾ ಮತ್ತಿತರರು ಇದ್ದರು.