ಶೆಟ್ಟಿಕೊಪ್ಪ ಸರ್ಕಾರಿ ಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಉದ್ಘಾಟಿಸಿದರು. ಸುನೀಲ್‌ಕುಮಾರ್, ಶೈಲಾ, ಎ.ಬಿ.ಮಂಜುನಾಥ್, ಚಂದ್ರಶೇಖರ್, ವಿಶ್ವನಾಥ್, ಎಂ.ಜಗದೀಶ್, ಎನ್.ಎಂ. ಕಾಂತರಾಜ್, ಅಕ್ಷತ್‌ಮಳಲಿ ಇತರರಿದ್ದರು. 
ಜಿಲ್ಲೆ

ಜ್ಞಾನದ ವಿಕಾಸವೇ ಶಿಕ್ಷಣ

ಎನ್.ಆರ್.ಪುರ: ಸುಪ್ತ ಜ್ಞಾನದ ವಿಕಾಸವೇ ಶಿಕ್ಷಣ ಎಂದು ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ವಿಶ್ವನಾಥ್ ಹೇಳಿದರು.

ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಶೇ.50 ವಿದ್ಯೆ ಕಲಿತರೆ, ಶೇ.50 ವಿದ್ಯೆಯನ್ನು ಮನೆಯಲ್ಲಿ ಪಡೆಯಬೇಕು. ಮಕ್ಕಳಿಗೆ ಸಂದರ್ಭಕ್ಕೆ ತಕ್ಕ ಶಿಕ್ಷಣ ಸಿಗಬೇಕು ಎಂದರು.

ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಕ್ರೀಡಾಸಕ್ತಿ, ಸಾಂಸ್ಕೃತಿಕ ಪ್ರತಿಭೆ ಇಲ್ಲಿ ಅನಾವರಣಗೊಳ್ಳುತ್ತವೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಕಲ್ಲು ಶಿಲೆಯಾಗಬೇಕಾದರೆ ಶಿಲ್ಪಿಯ ಪರಿಶ್ರಮವಿರಬೇಕು. ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗಬೇಕಾದರೆ ಶಿಕ್ಷಕರ ಪಾತ್ರ, ಪರಿಶ್ರಮವಿರಬೇಕು ಎಂದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಮುಂದಿನ ದಿನಗಳಲ್ಲಿ ಹಳೇ ವಿದ್ಯಾರ್ಥಿಗಳ ಸಹಕಾರದಿಂದ 2 ಲಕ್ಷ ರೂಪಾಯಿಯನ್ನು ಶಾಲೆ ಹೆಸರನಲ್ಲಿ ಠೇವಣಿ ಇಟ್ಟು, ಬರುವ ಆದಾಯದಲ್ಲಿ ಶಾಲೆಯ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.

ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಪ್ರಭಾರ ಶಿಕ್ಷಕಿ ಪಿ.ವಿ.ಶುಭಾ, ದಾನಿಗಳಾದ ಎನ್.ಎಂ.ಕಾಂತರಾಜ್, ಮಳಲಿ ಅಕ್ಷತ್, ಅತಿಥಿ ಶಿಕ್ಷಕಿ ಗಾಯತ್ರಿ, ಸಹಪ್ರಾಧ್ಯಾಪಕ ವಿಶ್ವನಾಥ್, ಬಣಗಿ ರಾಜೇಂದ್ರ, ಸದ್ದಾಂ, ನಿವೃತ್ತ ಶಿಕ್ಷಕರಾದ ಹನುಮಂತಪ್ಪ ಛಲವಾದಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಸದಸ್ಯರಾದ ಎ.ಬಿ.ಮಂಜುನಾಥ್, ಶೈಲಾ ಮಹೇಶ್, ವಾಣಿ ನರೇಂದ್ರ, ಪುಟ್ಟಮ್ಮ, ಸುಭಾಷ್, ಬಿ.ಟಿ.ಪ್ರಕಾಶ್, ತಿಮ್ಮಮ್ಮ, ವಿಂಧ್ಯಾ ಇತರರಿದ್ದರು.