ಯಾದಗಿರಿ: ಮನುಷ್ಯನ ಮನೆ-ಮನಗಳಲ್ಲಿ ಅಡಗಿರುವ ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಜ್ಞಾನದ ಬೆಳಕನ್ನು ನೀಡುವುದರ ಸಂಕೇತವೇ ಲಕ್ಷ ದೀಪೋತ್ಸವ ಎಂದು ನಾಡೋಜ ಡಾ.ಅನ್ನದಾನ ಮಹಾಶಿವಯೋಗಿಗಳು ನುಡಿದರು.
ಸಮೀಪದ ತೆಲಂಗಾಣ ರಾಜ್ಯದ ನೇರಡಗಂನ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದಲ್ಲಿ ಕಾತರ್ಿಕ ಮಾಸದ ನಿಮಿತ್ತ ಸೋಮವಾರ ಸಂಜೆ ಆಯೋಜಿಸಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಕ್ತರಿಗೆ ಹಿತೋಪದೇಶ ನೀಡಿದ ಅವರು, ಸ್ವಂತ ಪರಿಶ್ರಮದಿಂದ ಪ್ರಗತಿ ಸಾಸಿದ ವ್ಯಕ್ತಿಗೆ ಸಮಾಜದಲ್ಲಿ ಬೆಲೆ ಜಾಸ್ತಿ ಹೀಗಾಗಿ ಭಕ್ತರು ತನ್ನ ಜೀವನದ ಶಿಲ್ಪಿ ತಾನೇ ಎಂಬುದನ್ನು ಅರಿತು ಬಾಳಬೇಕು ಎಂದರು.
ಸಾಮಾಜದ ಸುಧಾರಣೆಗೆ ಮಠ-ಮಂದಿರಗಳ ಪಾತ್ರ ಬಹುಮುಖ್ಯ. ಅದಕ್ಕೆ ಪೂರಕವಾಗಿ ಶ್ರೀಮಠದ ಪಂಚಮ ಸಿದ್ಧಲಿಂಗ ಶ್ರೀಗಳು ವರ್ಷದುದ್ದಕ್ಕೂ ನಾನಾ ಧಾಮರ್ಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಭಕ್ತರನ್ನು ಸೇರಿಸಿ ಜ್ಞಾನದ ಬುತ್ತಿಯನ್ನು ಉಣಬಡಿಸುತ್ತಿದ್ದು, ಈ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹರಸಿದರು.
ಶ್ರೀಮಠದ ಪೀಠಾಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಪ್ರತೀ ವರ್ಷದ ಕಾತರ್ಿಕ ದೀಪೋತ್ಸವ ಮಾಡುತ್ತಿದ್ದ ನಮಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಮಾಡಬೇಕು, ಗಡಿ ಭಾಗದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಸಂಕಲ್ಪವಿತ್ತು. ಅದನ್ನು ಕನರ್ಾಟಕ-ತೆಲಂಗಾಣ ಉಭಯ ರಾಜ್ಯಗಳ ಭಕ್ತರು ಸಹೋದರತೆಯ ಮನೋಭಾವದಿಂದ ಕೂಡಿ ಯಶಸ್ವಿಗೊಳಿಸಿದ್ದಾರೆ ಎಂದರು.
ಸಿದ್ಧಲಿಂಗ ಶ್ರೀಗಳು ವಳಬಳ್ಳಾರಿ, ಶ್ರೀಗುರುಪಾದ ಸ್ವಾಮಿಗಳು, ಮುರುಘರಾಜೇಂದ್ರ ಶರಣರು, ಪ್ರಭು ನೀಲಕಂಠ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, ಸಿದ್ಧಲಿಂಗ ಸ್ವಾಮಿಗಳಿ, ಶಿವಲಿಂಗ ಸ್ವಾಮಿಗಳು, ಆನಂದ ಭಾರತಿ ಮಾತಾಜೀ, ಚನ್ನಬಸವ ಸ್ವಾಮಿಗಳು ನಿಡಗುಂದಿಕೊಪ್ಪ, ಚನ್ನಮಲ್ಲ ಸ್ವಾಮಿಗಳು, ಶಿವ ಹಂಸಾರೂಢ ಸ್ವಾಮಿಗಳು, ತೆಲಂಗಾಣದ ಕೃಷಿ ಸಚಿವ ಸಿಂಗಾರೆಡ್ಡಿ ನಿರಂಜನರೆಡ್ಡಿ, ಮಖ್ತಲ್ ಶಾಸಕ ಚಿಟ್ಟೆಂ ರಾಮಮೋಹನರೆಡ್ಡಿ, ನಾರಾಯಣಪೇಟ್ ಶಾಸಕ
ಎಸ್.ಆರ್.ರೆಡ್ಡಿ, ಸಂಸದ ಎಂ.ಶ್ರೀನಿವಾಸರೆಡ್ಡಿ, ಜಿಲಾಕಾರಿ ಕೋಯಾ ಶ್ರೀಹರ್ಷ, ಯಾದಗಿರಿಯ ಮಹೇಶರೆಡ್ಡಿ ಮುದ್ನಾಳ, ಶರಣಗೌಡ ಬಾಡಿಯಾಳ, ಶರಣಪ್ಪಗೌಡ ರಾಯಚೂರ, ವಾಕಿಟಿ ಶ್ರೀಹರಿ, ರಾಜುಲ ಆಶೀರೆಡ್ಡಿ, ಪ್ರಶಾಂತರೆಡ್ಡಿ, ಶಿವರಾಜ ಪಾಟೀಲ್ ಗುಜರ್ಾಲ ಇದ್ದರು.