ಬಾಳೆಹೊನ್ನೂರು: ಹಿಂದುಗಳ ಪವಿತ್ರ ಹಬ್ಬ ಗಣೇಶೋತ್ಸವ ಆಚರಣೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸೀಮಿತವಾಗದೆ ಜ್ಞಾನ ಸಂಪಾದನೆ ವೇದಿಕೆಯಾಗಬೇಕು ಎಂದು ಎನ್.ಆರ್.ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.
ಆದರ್ಶ ನಗರ ಇಟ್ಟಿಗೆ ಸೀಗೋಡಿನ ವಿದ್ಯಾಗಣಪತಿ ಸೇವಾ ಸಮಿತಿಯ ಗಣೇಶೋತ್ಸವದಲ್ಲಿ ತಾಲೂಕು ಕಸಾಪ ಸಹಯೋಗದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ, ಗಾದೆ, ಒಗಟು ಹೇಳುವ ಸ್ಪರ್ಧೆಯಲ್ಲಿ ಮಾತನಾಡಿದರು. ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಹಣ ವಿನಿಯೋಗಿಸದೆ ಜ್ಞಾನದ ಬುತ್ತಿ ತುಂಬುವ ಕೆಲಸವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ ಸಾರ್ವಜನಿಕ ಗಣೇಶೋತ್ಸವದ ವೇದಿಕೆಗೆ ಪದಾರ್ಪಣೆ ಮಾಡಿ ಹಳ್ಳಿಗಳಲ್ಲಿಯೂ ಸಾಹಿತ್ಯ, ಸಂಸ್ಕೃತಿಯ ಅರಿವು ಮೂಡಿಸುತ್ತಿದೆ ಎಂದರು.
ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ, ರವಿಕುಮಾರ್, ಉದಯ್ ಗಿಲ್ಲಿ, ಕೆ.ಪ್ರಶಾಂತ್‌ಕುಮಾರ್, ಜಗದೀಶ್, ಹರೀಶ್, ಲವಕುಶ, ಶಿವಕುಮಾರ್ ಇತರರಿದ್ದರು.