ಕುಶಾನಗರದದಿಂದ ಚಿಕ್ಕಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರಕ್ಕೆ ಮೊದಲ ಸಂಚಾರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮೂಲಕ ಬಮದಿಳಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ. 
ಜಿಲ್ಲೆ

ಜ್ಞಾನ ಕಾವೇರಿಗೆ ಬಸ್ ಸಂಚಾರ ಆರಂಭ

ಕುಶಾಲನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬುಧವಾರದಿಂದ ಕುಶಾನಗರದದಿಂದ ಚಿಕ್ಕಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರಕ್ಕೆ ಬಸ್ ಸೌಲಭ್ಯ ಕಲ್ಪಿಸಿದೆ.

ಪ್ರತಿದಿನ ಬೆಳಗ್ಗೆ 9ಕ್ಕೆ ಕುಶಾಲನಗರದಿಂದ ಹೊರಡುವ ಬಸ್ 9.45ಕ್ಕೆ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ ತಲುಪಲಿದೆ. ಸಂಜೆ 5ಕ್ಕೆ ಕೇಂದ್ರದಿಂದ ಹೊರಟು 5.45ಕ್ಕೆ ಕುಶಾಲನಗರ ತಲುಪಲಿದೆ. ವಿದ್ಯಾರ್ಥಿಗಳು ಬಸ್ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಕೇಂದ್ರದ ಪ್ರಭಾರ ನಿರ್ದೇಶಕ ಡಾ.ಕೆ.ಕೆ.ಧರ್ಮಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.