ಕಲಬುರಗಿ: ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಜೋಳ ಮತ್ತು ಭತ್ತ ಖರೀದಿಸಲು ಜಿಲ್ಲಾ ಟಾಸ್ಕ್ಫರ್ಸ್ ಸಮಿತಿ ತರ‍್ಮಾನದಂತೆ ೭ ಜೋಳ ಮತ್ತು ೮ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರು ನೋಂದಣಿ ಮಾಡಿಕೊಂಡು ಫಸಲು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಜಿಲ್ಲೆಯ ರೈತರಿಂದ ಜೋಳ ಮತ್ತು ಭತ್ತ ನೋಂದಣಿ ಮತ್ತು ಖರೀದಿಗೆ ಸಂಗ್ರಹಣಾ ಏಜೆನ್ಸಿಯನ್ನಾಗಿ ರ‍್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ರ‍್ಕಾರ ನೇಮಿಸಿದ್ದು, ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ&ಹೈಬ್ರಿಡ್ ಪ್ರತಿ ಕ್ವಿಂಟಾಲ್ಗೆ ೩೩೭೧ ರೂ. ಹಾಗೂ ಬಿಳಿಜೋಳ ಪ್ರತಿ ಕ್ವಿಂಟಾಲ್ಗೆ ೩೪೨೧ ರೂ. ದರ ನಿಗದಿಯಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ ೨೩೦೦ ರೂ., ಭತ್ತ ಗ್ರೇಡ್&ಎ ಪ್ರತಿ ಕ್ವಿಂಟಾಲ್ಗೆ ದರ ೨೩೨೦ ರೂ. ಇರುತ್ತದೆ. ರೈತರು ತಾವು ಬೆಳೆದ ಭತ್ತ ಮತ್ತು ಜೋಳವನ್ನು ಮಾರಾಟ ಮಾಡಲು ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ನೀಡಲಾಗುವ ಐಡಿ ಮತ್ತು ಆಧಾರ್ ಕರ್ಡ್ನ ಪ್ರತಿಯೊಂದಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಏ.೧ರಿಂದ ಮೇ ೩೧ರವರೆಗೆ ನೋಂದಾಯಿತ ರೈತರಿಂದ ಜೋಳ ಖರೀದಿಸಲಾಗುತ್ತದೆ. ಮಾ.೨೯ರಿಂದ ಏ.೨೫ರವರೆಗೆ ಭತ್ತ ಖರೀದಿಗೆ ರೈತರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಮೇ ೩೧ರವರೆಗೆ ಭತ್ತ ಖರೀದಿಸಲಾಗುತ್ತದೆ. ಮಾಹಿತಿಗೆ ದೂ.೦೮೪೭೨&೨೫೪೯೮೪, ಮೊ. ೯೪೪೮೪೯೬೦೨೩ ಕರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.