ಜಿಲ್ಲೆ

ಜೋಲಿಯೇ ಆಂಬುಲೆನ್ಸ್‌ - ಈ ಊರಿನ ಜನರ ಗೋಳು ಕೇಳಿದ್ರೆ ದಂಗಾಗ್ತೀರ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ
ಎದೆ ನೋವಿನಿಂದ ಬಳಲುತ್ತಿದ್ದ ವೃದ್ಧನೊಬ್ಬನನ್ನು ಸುಮಾರು 5 ಕಿಮೀ ಜೋಲಿಯಲ್ಲಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಬಳಿ ನಡೆದಿದೆ.
ವರಿಲಬೇಣ ಗ್ರಾಮದ ನೂರಾ ಪೊಕ್ಕಾ ಗೌಡ ಎಂಬುವವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡಿತ್ತು. ಹೆದ್ದಾರಿಯಿಂದ 8 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ವಾಹನ ತೆರಳುವ ರಸ್ತೆಯಿಲ್ಲ. 3 ಕಿಮೀ ವಾಹನದಲ್ಲಿ ತೆರಳಿ ನಂತರ ಐದು ಕಿಮೀ ನಡೆದೇ ಸಾಗಬೇಕು.
ಅನಾರೋಗ್ಯಕ್ಕೊಳಗಾದವನ್ನು ಹೊತ್ತು ತರುವುದು ಈ ಊರಿನಲ್ಲಿ ಸಾಮಾನ್ಯ. ದೊಡ್ಡ ಮರದ ಕೋಲಿಗೆ ಖುರ್ಚಿ ಕಟ್ಟಿ ಅದನ್ನು ನಾಲ್ವರನ್ನು ಹೊತ್ತುಕೊಂಡು ಹೋಗುವ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ವೃದ್ಧರನ್ನು ಸಕಲಬೇಣದವರೆಗೆ ಹೊತ್ತೊಯ್ದು, ಅಲ್ಲಿಂದ ಖಾಸಗಿ ವಾಹನದ ಮೂಲಕ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಊರು ಮಳೆಗಾಲದಲ್ಲಿ ದ್ವೀಪವಾಗುತ್ತದೆ. ಶಾಲೆ, ಕಾಲೇಜ್‌ಗಳಿಗೆ ತೆರಳುವವರೂ ನಡೆದೇ ಸಾಗಬೇಕಾದ ಪರಿಸ್ಥಿತಿ ಇದೆ.