ಯಾದಗಿರಿ: ಜಿಲ್ಲೆಗೊಂದು ವಿಶ್ವವಿದ್ಯಾಲಯ ಇರಬೇಕು ಎನ್ನುವಂತೆ ಗಿರಿ ಜಿಲ್ಲೆ ಯಾದಗಿರಿಯಲ್ಲೂ ನೂತನ ವಿವಿ ಸ್ಥಾಪಿಸಬೇಕೆಂಬ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಪೀಠಿಕೆ ಹಾಕಿದ್ದಾರೆ.
ಶಾಸಕರ ಈ ಹಕ್ಕೊತ್ತಾಯದ ಕೂಗು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೇಳಿಸಬೇಕಾದರೆ ಜಿಲ್ಲೆಯ ಹಾಲಿ-ಮಾಜಿ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಂಘ-ಸAಸ್ಥೆ ಪದಾಧಿಕಾರಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಎಚ್ಚೆತ್ತು ವಿವಿಧ ಹಂತದ ಹೋರಾಟಕ್ಕೆ ಮುಂದಾಗುವ ಅಗತ್ಯವಿದೆ. ಅಂದಾಗಲೇ ಸರ್ಕಾರಗಳು ವಿವಿ ಸ್ಥಾಪನೆಗೆ ಮುಂದಾಗಬಹುದು.
ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ 12 ವರ್ಷದಲ್ಲಿ ಒಂದೊAದೇ ಸೌಲಭ್ಯವನ್ನು ಯಾದಗಿರಿ ಪಡೆಯುತ್ತಿದೆ. ಮೆಡಿಕಲ್ ಕಾಲೇಜು ಆಗಬೇಕಾದರೆ ನೂರೆಂಟು ಸಲ ಒತ್ತಡ, ಹೋರಾಟ ಮಾಡಲಾಗಿದೆ. ವಿವಿ ವಿಷಯದಲ್ಲೂ ಇಂಥz್ದೆÃ ಕೆಲಸ ಆಗಬೇಕಿರುವುದು ಜರೂರಿಯಾಗಿದೆ.
ಅಕ್ಕ-ಪಕ್ಕದ ಜಿಲ್ಲೆಗಳಲ್ಲಿ ವಿವಿ ಸ್ಥಾಪನೆಯಾಗಿವೆ. ಇದಕ್ಕಾಗಿ ಕೇಂದ್ರ ಸ್ಥಾನ ಅಥವಾ ಸಮೀಪದಲ್ಲಿ 50-100 ಎಕರೆ ಭೂಮಿ ಬೇಕು. ಇಲ್ಲಿ ಇಷ್ಟು ಜಮೀನು ಲಭ್ಯವಿದೆ. ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಿಸಿ ಸಮಗ್ರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆಗ ವಿವಿ ಸ್ಥಾಪನೆಯ ಒಂದೊದೇ ಕೆಲಸ ಶುರುವಾಗುವ ನಿಟ್ಟಿನಲ್ಲಿ ಪೀಠಿಕೆ ಹಾಕಿದ್ದಾರೆ ಶಾಸಕ ಕಂದಕೂರ.
ವಿವಿ ಸ್ಥಾಪನೆಯಾದರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನೇಕ ಹೊಸ ಹೊಸ ಕೋರ್ಸ್ಗಳ ಅಧ್ಯಯನ, ಶೈಕ್ಷಣಿಕ ಸಂಶೋಧನೆ, ಪಿಎಚ್.ಡಿ, ಪ್ರಬಂಧ ಮಂಡನೆ ಹೀಗೆ ನಾನಾ ರೀತಿಯಲ್ಲಿ ಅನುಕೂಲವಾಗಲಿದೆ. ಆಂಧ್ರ ಮತ್ತು ತೆಲಂಗಾಣ ಗಡಿ ಜಿಲ್ಲೆಯಾಗಿದ್ದರಿಂದ ಕನ್ನಡ ಭಾಷೆ ಪ್ರವರ್ಧಮಾನಕ್ಕೂ ಕೊಂಡೊಯ್ಯಲು ಸಹ ಅನುವು ಆಗಲಿದೆ. ಕಲ್ಯಾಣ ಕರ್ನಾಟಕದಲ್ಲೇ ಅತಿ ಹೆಚ್ಚು (110ಕ್ಕೂ ಅಧಿಕ) ಕಾಲೇಜು ಹೊಂದಿರುವ ಯಾದಗಿರಿಯಲ್ಲಿ ವಿಶ್ವವಿದ್ಯಾಲಯವಾದರೆ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಲಿದೆ.
ಇಷ್ಟು ವರ್ಷಗಳಲ್ಲಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಗುಲ್ಬರ್ಗ ಸೇರಿ ನಾಡಿನ ವಿವಿಧ ವಿವಿಗಳಲ್ಲಿ ಅಭ್ಯಸಿಸಿ ಪದವಿ ಪಡೆದಿದ್ದಾರೆ. ಆದರೆ ನಮ್ಮ ಜಿಲ್ಲೆಯಲ್ಲೇ ವಿವಿ ಶುರುವಾದರೆ ಸ್ಥಳೀಯವಾಗಿ ಉನ್ನತ ಶಿಕ್ಷಣ ಪಡೆಯಬಹುದಾಗಿದೆ. ಜಿಲ್ಲೆಯ ಹಂತ ಹಂತದ ಅಭಿವೃದ್ಧಿಗೂ ಕಾರಣವಾಗಲಿದೆ. ಜಿಲ್ಲೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸುವುದರ ಜತೆಗೆ ಸಾರ್ವಜನಿಕರು ಅಗತ್ಯ ಸಹಕಾರ ಮತ್ತು ಹೋರಾಟಕ್ಕೆ ಸೈ ಎಂದಾದರೆ ವಿವಿ ಮಂಜೂರಾಗುವ ಸಾಧ್ಯತೆ ಹೆಚ್ಚು.