ಮೈಸೂರು: ಕಾಂಗ್ರೆಸ್‌ನಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ 3700 ಕಿ.ಮೀ. ಸಾಗುವ ಭಾರತ್ ಜೋಡೋ ಯಾತ್ರೆಗೆ ನಗರದ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ಮುಖ್ಯಸ್ಥ ಡಾ.ಶುಶ್ರೂತ್ ಆಯ್ಕೆಯಾಗಿದ್ದಾರೆ. ಯಾತ್ರೆಯಲ್ಲಿ 100 ಜನ ಸಾಗಲಿದ್ದು, ಕರ್ನಾಟಕದಿಂದ ಐವರು ಮಾತ್ರ ಇರಲಿದ್ದಾರೆ. ಈ ಐವರಲ್ಲಿ ಡಾ.ಶುಶ್ರೂತ್ ಒಬ್ಬರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.