ಅರಕಲಗೂಡು ಸಮೀಪದ ಜೋಡಿಗುಬ್ಬಿ ಗ್ರಾಮದಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಹನುಮಂತೋತ್ಸವದಲ್ಲಿ ಭಕ್ತರು ಬಣ್ಣದ ಓಕುಳಿಯಾಡಿ ಸಂಭ್ರಮಿಸಿದರು. 
ಜಿಲ್ಲೆ

ಜೋಡಿಗುಬ್ಬಿಯಲ್ಲಿ ಹನುಮಂತೋತ್ಸವ

ಅರಕಲಗೂಡು: ಇಲ್ಲಿಗೆ ಸಮೀಪದ ಜೋಡಿಗುಬ್ಬಿ ಗ್ರಾಮದಲ್ಲಿ ಶ್ರೀರಾಮ ಸೇವಾಸಂಘ ಕಳೆದ 12 ದಿನಗಳಿಂದ ಹಮ್ಮಿಕೊಂಡಿದ್ದ ರಾಮೋತ್ಸವ ಕಾರ್ಯಕ್ರಮಗಳು ಸೋಮವಾರ ಹನುಮಂತೋತ್ಸವದೊಂದಿಗೆ ಸಂಪನ್ನಗೊಂಡವು.

ಸೋಮವಾರ ಹನುಮಂತನ ವಿಗ್ರಹದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಭಕ್ತರು ಓಕುಳಿಯಾಡಿ ಸಂಭ್ರಮಿಸಿದರು. ಬಳಿಕ ರಾಮಮಂದಿರದಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ನಡೆಸಿ ಪ್ರಸಾದ ವಿನಿಯೋಗ ನಡೆಸಲಾಯಿತು. ರಾತ್ರಿ ಹನುಂತೋತ್ಸವ ನಡೆಯಿತು. ಶ್ರೀರಾಮ ಸೇವಾ ಸಂಘದ ಪದಾಧಿಕಾರಿಗಳು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.