ಜಿಲ್ಲೆ

ಜೋಡಿಗುಬ್ಬಿಯಲ್ಲಿ ಅತಿಥಿಗೃಹ ಉದ್ಘಾಟನೆ

ಅರಕಲಗೂಡು: ಹಳ್ಳಿ ಮೈಸೂರು ಹೋಬಳಿಯ ಜೋಡಿಗುಬ್ಬಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮಂದಿರದ ಅತಿಥಿಗೃಹವನ್ನು ಭಾನುವಾರ ಉದ್ಘಾಟಿಸಲಾಯಿತು.


ಉದ್ಘಾಟನೆ ನೇರವೇರಿಸಿದ ಬೆಂಗಳೂರಿನ ಜೋಡಿಗುಬ್ಬಿ ವಿಪ್ರ ಬಳಗದ ಅಧ್ಯಕ್ಷ ಜಿ.ಎನ್.ರಾಮಚಂದ್ರ ಮಾತನಾಡಿ, ಕಳೆದ ವರ್ಷ ಗ್ರಾಮದಲ್ಲಿ ನಡೆದ ರಾಮಮಂದಿರದ ನೂತನ ಕಟ್ಟಡ ಊದ್ಘಾಟನೆ ಸಮಯದಲ್ಲಿ ಸುಬ್ಬಮ್ಮ ದೇವರಯ್ಯ, ಪುಟ್ಟಮ್ಮ ಜಿ.ಸುಬ್ಬಯ್ಯ ಕುಟುಂಬದವರು ನೀವೇಶನವನ್ನು ಕೊಡುಗೆಯಾಗಿ ನೀಡಿದ್ದರು. ಗ್ರಾಮದಲ್ಲಿ ಹಿಂದೆ ವಾಸವಿದ್ದ ವಿಪ್ರ ಸಮುದಾಯದ ಬಹುತೇಕರು ಹೊರ ಊರುಗಳಲ್ಲಿ ನೆಲೆಸಿದ್ದು, ಊರಿಗೆ ಬಂದಾಗ ತಂಗಲು ಸ್ಥಳಾವಕಾಶದ ಕೊರತೆ ಇತ್ತು. ಹೊರ ಊರುಗಳಿಂದ ಗ್ರಾಮಕ್ಕೆ ಬಂದವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದಾನಿಗಳ ನೆರವು ಪಡೆದು 26 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಿಸಿ ಉದ್ಘಾಟಿಸಲಾಗಿದೆ. ವಿವಿಧ ರೀತಿಯಲ್ಲಿ ಸಹಾಯಹಸ್ತ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ವಿವಿಧ ಹೋಮ ಹಾಗೂ ಗ್ರಾಮದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯ, ಅನ್ನ ಸಂತರ್ಪಣೆ ನಡೆಸಲಾಯಿತು.

ಪುರೋಹಿತ ಗಿರೀಶ್ ಜೋಯಿಸ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಬಳಗದ ಮುಖಂಡರಾದ ಶ್ಯಾಮ ಸುಂದರ್. ಜಿ.ಕೆ. ವಿಶ್ವನಾಥ್, ರಾಜಶೇಖರ್, ವೆಂಕಟೇಶಮೂರ್ತಿ, ನಾಗುಪ್ರವೀಣ್, ಸುರೇಶ್ ಜಮದಗ್ನಿ, ಜಿ.ಎನ್. ದೇವರಯ್ಯ, ಜಿ.ಎಸ್.ಮುರಳೀಧರ್, ಪೋಸ್ಟ್ ರಾಮಚಂದ್ರ ಇದ್ದರು