ಜಿಲ್ಲೆ

ಜೋಗಿಮಟ್ಟಿ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವು

ಚಿತ್ರದುರ್ಗ: ಬೇಸಿಗೆ ಕಾರಣಕ್ಕೆ ಜೋಗಿಮಟ್ಟಿ ವನ್ಯಜೀವಿ ಧಾಮದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಅರಣ್ಯ ಇಲಾಖೆ ಹಿಂಪಡೆ ದಿದೆ. ಸೋಮವಾರದಿಂದ ಜೋಗಿಮಟ್ಟಿ ವೀಕ್ಷಣೆಗೆ ಮರು ಅವಕಾಶ ನೀಡಿದೆ.

ಕಾಡ್ಗಿಜ್ಚು,ಸಾರ್ವಜನಿಕರ ಸಂಚಾರದಿಂದ ಆಕಸ್ಮಿಕ ಬೆಂಕಿ ಅನಾಹುತಗಳಾಗಬಹುದು ಎಂಬ ಕಾರಣಕ್ಕೆ ಇಲಾಖೆ ಕಳೆದ ಫೆಬ್ರವರಿ 1ರಿಂ ದ ಜೋಗಿಮಟ್ಟಿಗೆ ಸಾರ್ವಜನಿಕರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಆದರೆ ಈ ವನ್ಯಜೀವಿ ವ್ಯಾಪ್ತಿಯಲ್ಲಿರುವ ಆಡು ಮಲ್ಲೇಶ್ವರ ಕಿರು ಮೃಗಾಲಯ ಪ್ರವೇಶಕ್ಕೆ ಎಂದಿನಂತೆ ಅವಕಾಶವಿತ್ತು.

ಈಚೆಗೆ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ವಾತಾವರಣ ತಂಪಾಗುತ್ತಿದೆ.ಆಕಸ್ಮಿಕವಾಗಿ ಬೆಂಕಿ ತಗುಲಿದರೂ ಅದರಿಂದ ಆ ಗುವ ಪರಿಣಾಮವನ್ನು ಪರಿಶೀಲಿಸಿ ಇಲಾಖೆ ತೀರ್ಮಾನ ತೆಗೆದುಕೊಂಡಿದೆ. ಜೋಗಿಮಟ್ಟಿಗೆ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವಾಗಿದೆ ಎಂದು ಚಿತ್ರದುರ್ಗ ವಲಯ ಅರಣ್ಯಾಧಿಕಾರಿ ವಸಂತ್‌ಕುಮಾರ್ ತಿಳಿಸಿದ್ದಾರೆ.