ಜಿಲ್ಲೆ

ಜೋಗ ಪ್ರವಾಸ ಸೌಲಭ್ಯ

ಹಾಸನ: ಕೋವಿಡ್ ಕಾರಣದಿಂದ ತಡೆಹಿಡಿಯಲಾಗಿದ್ದ ಹಾಸನ-ಜೋಗ ಪ್ಯಾಕೇಜ್ ಪ್ರವಾಸವನ್ನು ಪುನಃ ಆರಂಭಿಸಲಾಗಿದೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಈ ಪ್ರವಾಸ ಸೌಲಭ್ಯ ಇದ್ದು, ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ.
ವಯಸ್ಕರಿಗೆ 550 ರೂ. ಮಕ್ಕಳಿಗೆ 300 ರೂ. ನಂತೆ ಹೋಗಿ ಬರುವ ದರ ನಿಗದಿಪಡಿಸಲಾಗಿದೆ. ವಾಹನವು ಹಾಸನದಿಂದ ಮುಂಜಾನೆ 5.30 ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಜೋಗ ತಲುಪಲಿದೆ. ಜೋಗದಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 10.30 ಕ್ಕೆ ಹಾಸನಕ್ಕೆ ತಲುಪಲಿದೆ.