ಜಿಲ್ಲೆ

ಜೋಕಾಲಿಗೆ ಸಿಲುಕಿ ಬಾಲಕ ಮೃತ್ಯು

ಮಂಗಳೂರು: ಸೀರೆಯಲ್ಲಿ ಜೋಕಾಲಿಯಾಡುತ್ತಿದ್ದಾಗ ಕುತ್ತಿಗೆಗೆ ಸಿಲುಕಿ ಸುಳ್ಯ ಗಡಿ ಭಾಗವಾದ ಚೆಂಬು ಗ್ರಾಮದಲ್ಲಿ ಬಾಲಕನೋರ್ವ ಮೃತಪಟ್ಟಿದ್ದಾನೆ.

ಚೆಂಬು ಗ್ರಾಮದ ಪನೇಡ್ಕ ತಾರಾಕುಮಾರ ಎಂಬವರ ಪುತ್ರ ಭರತ್ ಮೃತ ಬಾಲಕ. ಈತ ನಾಲ್ಕನೇ ತರಗತಿ ವಿದ್ಯಾರ್ಥಿ. ಬುಧವಾರ ಸಂಜೆ ಮನೆಯಲ್ಲಿ ಜೋಕಾಲಿ ಆಡುವಾಗ ಘಟನೆ ನಡೆದಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.