ಬಾಗಲಕೋಟೆ ತೋವಿವಿಯ ಆವರಣದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಜೈವಿಕ ತಂತ್ರಜ್ಞಾನ ಮತ್ತು ಅಂಗಾAಶ ಕೃಷಿ ವಿಜ್ಞಾನ ಕುರಿತು ಹಮ್ಮಿಕೊಂಡಿದ್ದ ವೈಜ್ಞಾನಿಕ ಕಾರ್ಯಾಗಾರ ತೋಟಗಾರಿಕೆ ವಿವಿಯ ಕುಲಸಚಿವ ಮಹಾದೇವ ಮುರಗಿ ಉದ್ಘಾಟಿಸಿದರು. ಉಪನಿರ್ದೇಶಕ ಎಂ. ವಿವೇಕಾನಂದ, ಪ್ರಾಧ್ಯಾಪಕ ಡಾ.ವಸಂತ ಗಾಣಿಗೇರ, ಕ್ಷೇತ್ರ ಶಿಕ್ಷಣಾಽಕಾರಿ ಎಂ.ಎಸ್.ಬಡದಾನಿ, ವಿಜ್ಞಾನ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ, ಗಣಿತ ವಿಷಯ ಪರಿವೀಕ್ಷಕ ಎಸ್.ಎಸ್.ಹಳವರ ಇದ್ದರು.  
ಜಿಲ್ಲೆ

ಜೈವಿಕ ತಂತ್ರಜ್ಞಾನದ ಬಳಕೆ ಬಹು ಮುಖ್ಯ

ಬಾಗಲಕೋಟೆ: ಪ್ರಸ್ತುತ ವಿಜ್ಞಾನ ವಿಷಯಗಳಲ್ಲಿನ ಅನೇಕ ಆವಿಷ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಂಶೋಧನೆಗಳಲ್ಲಿ ಜೈವಿಕ ತಂತ್ರಜ್ಞಾನದ ಪ್ರಾಮುಖ್ಯತೆ ಪಡೆದಿದೆ ಎಂದು ತೋಟಗಾರಿಕೆ ವಿವಿಯ ಕುಲಸಚಿವ ಮಹಾದೇವ ಮುರಗಿ ಹೇಳಿದರು.

ತೋವಿವಿಯ ಆವರಣದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಜೈವಿಕ ತಂತ್ರಜ್ಞಾನ ಮತ್ತು ಅಂಗಾAಶ ಕೃಷಿ ವಿಜ್ಞಾನ ಕುರಿತು ಹಮ್ಮಿಕೊಂಡಿದ್ದ ವೈಜ್ಞಾನಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗಾ0ಶ ಕೃಷಿ ವಿಜ್ಞಾನ ತೋಟಗಾರಿಕೆ ಕ್ಷೇತ್ರದ ಉತ್ತಮ ತಂತ್ರಜ್ಞಾನವಾಗಿದ್ದು, ಅನೇಕ ಬಗೆಯ ಸಸಿಗಳನ್ನು ಉತ್ಪಾದಿಸುವ ತಂತ್ರಜ್ಞಾನ ಇದಾಗಿದೆ. ಇಂತಹ ತಂತ್ರಜ್ಞಾನವನ್ನು ಗ್ರಾಮೀಣ ಭಾಗದ ಮಕ್ಕಳಲ್ಲಿ ಪರಿಚಯಿಸುವ ಕಾರ್ಯವನ್ನು ವಿಜ್ಞಾನ ಶಿಕ್ಷಕರು ಮಾಡಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ. ವಿವೇಕಾನಂದ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಸ್ತುತ ವೈಜ್ಞಾನಿಕ ಬೆಳವಣಿಗೆಗಳ ಮಾಹಿತಿಯನ್ನು ಅವಶ್ಯವಾಗಿದ್ದು, ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಜೊತೆಗೆ ವಿಜ್ಞಾನ ಶಿಕ್ಷಕರು ಈ ತರಹದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಪ್ರಾರಂಭದಲ್ಲಿ ತೋವಿವಿಯ ಪ್ರಾದ್ಯಾಪಕ ಡಾ.ವಸಂತ ಗಾಣಿಗೇರ ಮಾತನಾಡಿ, ವಿಜ್ಞಾನಕ್ಕೆ ಸಂಬAಽಸಿದ ಅನೇಕ ಹೊರ ಮತ್ತು ಒಳಾಂಗಣ ಪ್ರಾತ್ಯಕ್ಷಿಕೆಗಳನ್ನು ಉಪ ಪ್ರಾದೇಶಿಕ ವಿಜ್ಞಾನ ಕೆಂದ್ರದಲ್ಲಿ ಅನುಷ್ಠಾನಗೊಳಿಸಿದ್ದು, ಇದರ ಸದುಪಯೋಗವನ್ನು ಗ್ರಾಮೀಣ ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು. ವಿಜ್ಞಾನಕ್ಕೆ ಸಂಬ0ಸಿದ ನೂತನ ತಂತ್ರಜ್ಞಾನಗಳ ತರಬೇತಿ ಕಾರ್ಯಾಗಾರಗಳು ಕಾಲ ಕಾಲಕ್ಕೆ ನಡೆಯುತ್ತಿರಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಽಕಾರಿ ಎಂ.ಎಸ್.ಬಡದಾನಿ, ವಿಜ್ಞಾನ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ, ಗಣಿತ ವಿಷಯ ಪರಿವೀಕ್ಷಕ ಎಸ್.ಎಸ್.ಹಳವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಆಸೀಫ ಬಾಗವಾನ ವಂದಿಸಿದರು. ಈರಣ್ಣಾ ಬುಳ್ಳಾ ನಿರೂಪಿಸಿದರು.