ಜಿಲ್ಲೆ

ಜೈಲ್ ನಲ್ಲಿ ಮಾರಾಮಾರಿ ಇಬ್ಬರು ಕೈದಿಗಳಿಗೆ ಗಾಯ

reportermng

ಮಂಗಳೂರು: ನಗರದ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಾಯಗೊಂಡಿದ್ದಾರೆ.

ಅನ್ಸಾರ್ ಮತ್ತು ಝೈನುದ್ದೀನ್ ಗಾಯಾಳುಗಳು. ಬೆಳಗ್ಗೆ ಉಪಹಾರ ವಿತರಣೆ ವೇಳೆ ಘರ್ಷಣೆ ನಡೆದಿದೆ. ಪಣಂಬೂರು ಪೊಲೀಸರು ಬಂಧಿಸಿದ ದರೋಡೆ ಪ್ರಕರಣದ ಆರೋಪಿ ಸಮೀರ್ ಎಂಬಾತ ಹಲ್ಲೆ ನಡೆಸಿದ್ದಾನೆ. ಚಮಚೆ ಮತ್ತಿತರ ಅಡುಗೆ ಪಾತ್ರೆಗಳಿಂದ ಹಲ್ಲೆ ನಡೆದಿದೆ.

ಅನ್ಸಾರ್ ನ ಕೈ ಮತ್ತು ಕಾಲಿಗೆ, ಝೈನುದ್ದೀನ್ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ.